2 ತಲೆ ಕರುಗಳಿಗೆ ಜನ್ಮ ನೀಡಿದ ಹಸು

HUN-OCT-23-1(TWO HEADED OX KID)
ಹುಣಸೂರು ತಾಲೂಕು ಮೈಲಾಂಬೂರು ಗ್ರಾಮದಲ್ಲಿ ಹಸುವೊಂದು ಎರಡು ತಲೆ ಕರುವಿಗೆ ಜನ್ಮ ನೀಡಿದೆ.
Published on

ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿಯ ಮೈಲಾಂಬೂರು ಗ್ರಾಮದ ರೈತ ರಾಮಚಂದ್ರ ಅವರಿಗೆ ಸೇರಿದ ಜೆರ್ಸಿ ತಳಿಯ ಹಸುವೂಂದು ಸೋಮವಾರ ಸಂಜೆ ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿದೆ.

ಕರುವಿಗೆ ನಾಲ್ಕು ಕಾಲು ದೇಹ ಒಂದೇ ಇದ್ದು, ತಲೆ ಬುರುಡೆ ಎರಡು ಇರುವುದು ಆಶ್ಚರ್ಯ ಮೂಡಿಸಿದೆ. ಜನಿಸಿದ ಕೆಲವೇ ನಿಮಿಷಗಳಲ್ಲಿ ಕರು ಮೃತಪಟ್ಟಿದೆ. ಹಸು ಕರು ಹಾಕಲು ಬಹಳ ಹಿಂಸೆ ಪಡುತ್ತಿದ್ದನ್ನು ಕಂಡ ರೈತ ಸಮೀಪದ ಪಶು ವೈದ್ಯಾಧಿಕಾರಿಗೆ ತಿಳಿಸಿದಾಗ ಸ್ಥಳಕ್ಕೆ ಭೇಟಿ ನೀಡಿದ ವೈದ್ಯರು ತಮ್ಮ ಸಲಹೆ ಮೇರೆಗೆ ತಜ್ಞ ವೈದ್ಯರಿಂದ ಆಪರೇಷನ್ ಮಾಡಿ ಕರುವನ್ನು ಹೊರತೆಗೆಯಲಾಯಿತು. ವಿಚಿತ್ರವಾಗಿ ಜನಿಸಿದ ಎರಡು ತಲೆಯಳ್ಳ ಕರುವನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಸ್ಥಳೀಯರು ಜಮಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net