

ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ವಿದ್ಯುತ್ ತಗುಲಿ ಹಸು ಮೃತಪಟ್ಟಿದೆ.
ಗ್ರಾಮದ ಆಟೋ ಪ್ರಕಾಶ್ ತಮ್ಮ ಹಸುವನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ಜಮೀನಿನಲ್ಲಿದ್ದ ಟಿಸಿ ಸನಿಹದಲ್ಲೇ ಮೇಯುತ್ತಿದ್ದ ಹಸುವಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ. ಹಸು ಸಾವಿಗೆ ಸೆಸ್ಕ್ ನಿರ್ಲಕ್ಷೃವೇ ಕಾರಣವಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಮಾಲೀಕರು ಒತ್ತಾಯಿಸಿದ್ದಾರೆ.
.