

ನಾಪೋಕ್ಲು: ಮೇಯಲು ಬಿಟ್ಟ ಗಬ್ಬದ ಹಸುವಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದೆ. ಶುಕ್ರವಾರ ಸಂಜೆ ಟಿ. ಎಂ. ಶ್ಯಾಮ್ ಎಂಬವರ ಹಸು ಪೊನ್ನಾಡ್ ಸೂಪರ್ ಮಾರ್ಕೆಟಿನ ಎದುರಿನ ಗದ್ದೆಯಲ್ಲಿ ಹುಲ್ಲು ಮೇಯುತ್ತಿತ್ತು. ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ಸಾವು ಸಂಭವಿಸಿದೆ. ಇದರ ಜೊತೆಯಲ್ಲಿದ್ದ ಇತರ ಜಾನುವಾರಗಳು ಪ್ರಾಣಾಪಾಯದಿಂದ ಪಾರಾಗಿವೆ. ಶುಕ್ರವಾರ ಸಂಜೆ ಸುರಿದ ಮಳೆ, ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎನ್ನಲಾಗಿದೆ. ಸೆಸ್ಕ್ ಸಿಬ್ಬಂದಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕಾಫಿ ಬೆಳೆಗಾರ ಕಂಗಂಡ ಜಾಲಿ ಪೂವಪ್ಪ ಒತ್ತಾಯಿಸಿದ್ದಾರೆ.