ಮನೆ ಕುಸಿದು ಆಕಳು ಸಾವು

house collapsed
Published on

ಶಿಗ್ಗಾಂವಿ: ಆಕಸ್ಮಿಕವಾಗಿ ಮನೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ಆಕಳು ಮೃತಪಟ್ಟು, 80 ವರ್ಷದ ಅಜ್ಜಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ತಾಲೂಕಿನ ಬನ್ನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಸುಭಾಷಗೌಡ ದುಂಡಿಗೌಡ್ರ, ಬಸವಂತಗೌಡ ದುಂಡಿಗೌಡ್ರ, ರೇವನಗೌಡ ದುಂಡಿಗೌಡ್ರ ಎಂಬುವವರಿಗೆ ಸೇರಿದ ಮನೆ ಆಕಸ್ಮಿಕವಾಗಿ ಕುಸಿದುಬಿದ್ದಿದೆ. ಘಟನಾ ಸ್ಥಳಕ್ಕೆ ಗ್ರೇಡ್ -2 ತಹಸೀಲ್ದಾರ್ ರವಿ ಕೊರವರ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೊಮ್ಮಾಯಿ ಭೇಟಿ: ಆಕಸ್ಮಿಕವಾಗಿ ಕುಸಿದು ಬಿದ್ದ ಮನೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಮೃತಪಟ್ಟ ಹಸುವಿಗೆ 37 ಸಾವಿರ ರೂ., ಬಿದ್ದ ಮನೆಗಳ ನಿರ್ಮಾಣಕ್ಕಾಗಿ ಎನ್‌ಡಿಆರ್‌ಎಫ್ ಯೋಜನೆಯಡಿ 24 ಗಂಟೆಯೊಳಗಾಗಿ ಮನೆಗಳ ಮರು ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕೆಂದು ಗ್ರೇಡ್-2 ತಹಸೀಲ್ದಾರ್ ರವಿ ಕೊರವರಗೆ ಆದೇಶ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net