ಅತಿ ಹಿರಿಯ ಗೋವು ಕಾಳಿ ಹಸು ಇನ್ನಿಲ್ಲ

govud
Published on

ಕೋಟ: ಕೋಟದ ಶಾಂಭವೀ ಶಾಲಾ ಮೈದಾನದಲ್ಲಿ ಐದು ವರ್ಷಗಳ ಹಿಂದೆ ನಡೆದಿದ್ದ ರಾಜ್ಯಮಟ್ಟದ ಜಾನುವಾರು ಮೇಳದಲ್ಲಿ ಅತಿ ಹಿರಿಯ ಗೋವು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೋಟತಟ್ಟು ಪಡುಕರೆಯ ಶಿವಮೂರ್ತಿ ಉಪಾಧ್ಯ ಎಂಬುವರ ಕಾಳಿ ಎಂಬ ಹಸು ಶುಕ್ರವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಸುಮಾರು 25 ವರ್ಷ ವಯಸ್ಸಿನ ಈ ಪುಣ್ಯಕೋಟಿ ಕೋಟದಲ್ಲಿ ನಡೆದಿದ್ದ ಜಾನುವಾರು ಪ್ರದರ್ಶನದಲ್ಲಿ ವಿಶೇಷವಾಗಿ ಗಮನ ಸೆಳೆದಿತ್ತು. ಸಾಕಷ್ಟು ತಳಿಗಳ ಪ್ರದರ್ಶನ ನಡುವೆ ಹಿರಿಯ ವಯಸ್ಸಿನ ದೇಸಿ ತಳಿಯಾಗಿ ಗುರುತಿಸಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net