ವಿಷದ ಹಲಸಿನ ಹಣ್ಣು ತಿಂದು ಹಸುಗಳು ಸಾವು

web 2
Published on

ಆಲ್ದೂರು: ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಹಲಸಿನ ಹಣ್ಣಿನಲ್ಲಿ ವಿಷ ಬೆರೆಸಿಟ್ಟು ಹಸುಗಳನ್ನು ಅಮಾನುಷವಾಗಿ ಸಾಯಿಸಲಾಗಿದೆ.

ತೋಟಕ್ಕೆ ಹಸುಗಳು ಬರುತ್ತವೆ ಎಂಬ ಕಾರಣಕ್ಕೆ ಹಲಸಿನ ಹಣ್ಣಿನಲ್ಲಿ ವಿಷ ಬೆರೆಸಿಟ್ಟಿದ್ದರು. ಅದನ್ನು ತಿಂದ ಮೂರು ಹಸುಗಳು ದಾರುಣವಾಗಿ ಸಾವನ್ನಪ್ಪಿದ್ದು, ಇದರಲ್ಲಿ 2 ಗಬ್ಬದ ಹಸುಗಳು ಎನ್ನಲಾಗಿದೆ.

ಕಾಫಿ ತೋಟಕ್ಕೆ ಹಸುಗಳು ಬರುತ್ತವೆಂಬ ಕಾರಣಕ್ಕೆ ಹಲಸಿನ ಹಣ್ಣಿನಲ್ಲಿ ಟಿಮೇಟ್ ಬೆರೆಸಿಟ್ಟು ಹಸುಗಳನ್ನು ಸಾಯಿಸಿದ್ದಾರೆ ಎಂದು ಜಾನುವಾರು ಮಾಲೀಕರು ಆಲ್ದೂರು ಠಾಣೆಗೆ ದೂರು ನೀಡಿದ್ದಾರೆ. ಮಧು ಅವರಿಗೆ ಸೇರಿದ ಒಂದು ಹಸು ಹಾಗೂ ಕಿಟ್ಟಿಗೌಡ ಅವರ ಎರಡು ಹಸುಗಳು ಮೃತಪಟ್ಟಿವೆ.

ಆಲ್ದೂರು ಪಿಎಸ್​ಐ ಶಂಭುಲಿಂಗಯ್ಯ, ಎಎಸ್​ಐ ಪರಮೇಶ ಗೌಡ, ಸಿಬ್ಬಂದಿ ಪೂರ್ಣೆಶ್ , ವಸಂತ್ , ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಂಗಳವಾರ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮಣ್ಣು ಮಾಡಲಾಯಿತು. ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net