

ಶಿರಹಟ್ಟಿ: ತಾಲೂಕಿನ ಹೆಬ್ಬಾಳ ಗ್ರಾಮದ ಗೀತಾ ನವಲಿ ಅವರ ಜಮೀನಿನಲ್ಲಿನ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಆಕಳು ಹಾಗೂ ಕರು ಭಸ್ಮವಾದ ಘಟನೆ ಶುಕ್ರವಾರ ಸಂಭವಿಸಿದೆ. ಘಟನೆಯಲ್ಲಿ 4 ಚೀಲ ತೊಗರಿ ಕಾಳು, 10 ಕ್ವಿಂಟಾಲ್ ಉಳ್ಳಾಗಡ್ಡಿ, ಜಾನುವಾರುಗಳ ಆಹಾರವಾಗಿದ್ದ 2 ಗಾಡಿ ಶೇಂಗಾ ಹೊಟ್ಟು ಹಾಗೂ 2 ಗಾಡಿ ತೊಗರಿ ಹೊಟ್ಟು ಸಂಪೂರ್ಣ ಆಹುತಿಯಾಗಿದೆ. 10 ಚೀಲ ರಾಸಾಯನಿಕಗೊಬ್ಬರ, ಕೊಟ್ಟಿಗೆ ಪಕ್ಕದಲ್ಲಿದ್ದ ರೇಷ್ಮೆ ಶೆಡ್ಡಿಗೂ ಬೆಂಕಿ ತಗುಲಿದ್ದು, ರೇಷ್ಮೆ ಗೂಡುಗಳು ದಹನಗೊಂಡಿವೆ. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲೇ ಅಪಾರ ಪ್ರಮಾಣದ ಹಾನಿಯಾಗಿತ್ತು.