ಗೋಹತ್ಯೆ ಮಸೂದೆ ಅಂಗೀಕಾರ ದಿನವೇ ವಿಧಾನಸೌಧದಲ್ಲಿ ನಡೆಯಿತು ಅಚ್ಚರಿ ಘಟನೆ!

Cow
Published on

ಬೆಂಗಳೂರು: ಗೋಹತ್ಯೆ ಮಸೂದೆ ಅಂಗೀಕಾರವಾದ ದಿನ ವಿಧಾನಸೌಧದಲ್ಲಿ ಅಚ್ಚರಿಯ ಘನಟೆಯೊಂದು ನಡೆದಿದ್ದು, ಗೋವು ಪೂಜೆಗೆ ತಂದ ಗೋವಿನಿಂದ ಸಿಎಂ ಯಡಿಯೂರಪ್ಪ ಅವರಿಗೆ ಆಶೀರ್ವಾದ ಲಭಿಸಿದೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂದೆ ಗೋವುಗಳ ಪೂಜೆ ನೆರವೇರಿಸಲಾಗಿತ್ತು. ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸ್ಥಾಪಕ ವಿನಯ್ ಗುರೂಜಿ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗಿತ್ತು. ಈ ವೇಳೆ ಪೂಜೆ ಸಲ್ಲಿಸಿದ ಬಳಿಕ ಗೋವುಗಳನ್ನು ಕರೆದುಕೊಂಡು ಹೋಗಲು ಎಷ್ಟೇ ಪ್ರಯತ್ನ ಪಟ್ಟರು ಒಂದು ಗೋವು ಮಾತ್ರ ವಾಹನವೇರಲು ನಿರಾಕರಿಸಿತು.

ಗೋಪಾಲಕರ ಕೈಯಿಂದ ತಪ್ಪಿಸಿಕೊಂಡು ವಿಧಾನಸೌಧದ ಗೇಟಿನ ಬಳಿಯೇ ನಿಂತು ಗೋವು ತಲೆದೂಗಿತು. ಗೋಹತ್ಯೆ ಕಾಯ್ದೆ ಜಾರಿಗೆ ತಂದ ದಿನವೇ ಗೋವಿನ ವರ್ತನೆ ನೋಡಿ ಅಚ್ಚರಿ ಪಟ್ಟ ವಿಧಾನಸೌಧ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದನ್ನು ಯಡಿಯೂರಪ್ಪ ಅವರಿಗೆ ಗೋವಿನ ಆಶೀರ್ವಾದ ಎಂದೇ ಬಣ್ಣನೆ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net