ಮತ್ತೆ 12 ಹೊಸ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ: ರಾಜ್ಯದಲ್ಲಿ ಒಟ್ಟು 371 ಪ್ರಕರಣ, ಮರಣ ಪ್ರಮಾಣ 13

COVID19 Status Noon 12 KA 18 APR 20
Published on

ಬೆಂಗಳೂರು: ಕರೊನಾ COVID19 ಸೋಂಕು ದಿನೇದಿನೆ ಹೆಚ್ಚಾಗುತ್ತಿದ್ದು, ಶುಕ್ರವಾರ ಒಂದೇ ದಿನ 44 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಶುಕ್ರವಾರ ಸಂಜೆ 5ರಿಂದ ಶನಿವಾರ ಮಧ್ಯಾಹ್ನ 12 ಗಂಟೆ ತನಕ ಅವಧಿಯಲ್ಲಿ ಕೇವಲ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸಂಚಿತವಾಗಿ 371 ಕೋವಿಡ್ 19 ಪ್ರಕರಣಗಳು ಆದಂತಾಗಿದೆ. ಅಲ್ಲದೆ, ಇದುವರೆಗಿನ ಮರಣ ಪ್ರಮಾಣ 13 ಆಗಿದೆ.

ರಾಜ್ಯದಲ್ಲಿ ದಾಖಲಾಗಿರುವ 371 ಕೋವಿಡ್ 19 ಪ್ರಕರಣಗಳ ಪೈಕಿ 92 ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಹೊಸದಾಗಿ ಪತ್ತೆಯಾಗಿರುವ 12 ಪ್ರಕರಣಗಳ ಪೈಕಿ ಮೈಸೂರಿನಲ್ಲಿ 3, ಬಾಗಲಕೋಟೆ, ಕಲಬುರಗಿಗಳಲ್ಲಿ ತಲಾ 2, ವಿಜಯಪುರ, ಧಾರವಾಡ, ಬೆಳಗಾವಿ, ಗದಗ, ಮಂಡ್ಯಗಳಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.

ಮೈಸೂರಿನಲ್ಲಿ ಪತ್ತೆಯಾಗಿರುವ ಮೂರು ಪ್ರಕರಣಗಳಲ್ಲೂ ಸೋಂಕುಪೀಡಿತರು ಪುರುಷರು. ಎರಡು ಪ್ರಕರಣ ನಂಜನಗೂಡಿನಿಂದ ವರದಿಯಾದರೆ, ಮತ್ತೊಂದು ಮೈಸೂರು ನಗರದ್ದೇ ಆಗಿದೆ. ನಂಜನಗೂಡು ಪ್ರಕರಣಗಳ ಪೈಕಿ ಇಬ್ಬರಿಗೂ(ಒಬ್ಬರ ವಯಸ್ಸು 30, ಇನ್ನೊಬ್ಬರದ್ದು 50) P52 ವ್ಯಕ್ತಿ ಸಂಪರ್ಕದಿಂದ ಸೋಂಕು ತಗುಲಿದೆ. ಮೈಸೂರಿನ ಪ್ರಕರಣದಲ್ಲಿ ವ್ಯಕ್ತಿಗೆ 65 ವರ್ಷವಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಕಾಣಿಸಿಕೊಂಡಿದೆ.

ಲಬುರಗಿಯಲ್ಲಿ ಪತ್ತೆಯಾಗಿರುವ ಎರಡು ಪ್ರಕರಣಗಳಲ್ಲೂ ಸೋಂಕು ಗಂಡುಮಕ್ಕಳಲ್ಲೇ ಕಂಡುಬಂದಿದ್ದು, 34 ವರ್ಷದ ವ್ಯಕ್ತಿಗೆ ಪ್ರಯಾಣದ ಸಂದರ್ಭದಲ್ಲಿ P205 ಸಂಪರ್ಕವಾಗಿತ್ತು. ಇವರು ಕಲಬುರಗಿ ನಗರದವರೇ ಆಗಿದ್ದಾರೆ. ಇನ್ನೋರ್ವ ಶಹಾಬಾದ್​ನ ನಿವಾಸಿಯಾಗಿದ್ದು ವಯಸ್ಸು 16. ಈತ P174 ವ್ಯಕ್ತಿಯ ಸಂಪರ್ಕಕ್ಕೆ ಬಂದು ಸೋಂಕು ತಗುಲಿದೆ. ಬಾಗಲ ಕೋಟೆಯ ಎರಡು ಪ್ರಕರಣಗಳು ಕೂಡ P186ರ ಸಂಪರ್ಕದಿಂದ ಸೋಂಕು ಹರಡಿದ್ದು, ಒಬ್ಬರು ಮಹಿಳೆ(48), ಮತ್ತೊಬ್ಬರು ಪುರುಷ(65). ಪೂರ್ಣ ವಿವರಕ್ಕೆ ಕೆಳಗಿನ ಪಟ್ಟಿ ಗಮನಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net