ಮಂಗಳೂರು: ಎರಡನೇ ಹಂತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಸೋಮವಾರ ನಗರದ ವೆನ್ಲಾಕ್ ಆಸ್ಪತ್ರೆ ಆಯುಷ್ ಬ್ಲಾಕ್ ನಲ ಚಾಲನೆ ನೀಡಲಾಯಿತು.
ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ್ ಗಾಂವ್ಕರ್, ಪ್ರೊಬೆಷನರಿ ಐಎ ಎಸ್ ಅಧಿಕಾರಿ ಮೋನಾ ರಾವುತ್ ಮೊದಲಾಗಿ ಲಸಿಕೆ ಪಡೆದರು.ಜಿಲ್ಲಾಧಿಕಾರಿ ಮೊದಲಿಗರಾಗಿ ಲಸಿಕೆ ಪಡೆದರು. ಬಳಿಕ ಇತರ ಅಧಿಕಾರಿಗಳಿಗೆ ಲಸಿಕೆ ನೀಡಲಾಯಿತು.
ಇದಕ್ಕೂ ಮೊದಲು ಮೂಲತಃ ವೈದ್ಯರಾಗಿರುವ ಜಿಲ್ಲಾಧಿಕಾರಿಯವರು ಪೊಲೀಸ್ ಆಯುಕ್ತರು ಮತ್ತು ಉಪಾಯುಕ್ತರ ಬಿಪಿ ಚೆಕ್ ಮಾಡುವ ಮೂಲಕ ಗಮನ ಸೆಳೆದರು.
ಇಂದು ಒಟ್ಟು 41 ಸೆಷನ್ ಗಳಲ್ಲಿ 6054 ಮಂದಿ ಲಸಿಕೆ ಪಡೆಯಲಿದ್ದಾರೆ ಎಂದು ಡಿಎಚ್ಒ ರಾಮಚಂದ್ರ ಬಾಯರಿ ತಿಳಿಸಿದ್ದಾರೆ.