ರಾಜ್ಯದಲ್ಲಿ ಸೋಮವಾರ 2 ಸಾವಿರಕ್ಕಿಂತ ಕಡಿಮೆ ಕೋವಿಡ್​ ಪ್ರಕರಣ ಪತ್ತೆ

corona
Published on

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 1,963 ಹೊಸ ಕರೊನಾ ಪ್ರಕರಣ ಪತ್ತೆಯಾಗಿದ್ದು, 4 ತಿಂಗಳ ಬಳಿಕ ಹೊಸ ಪ್ರಕರಣ ದೃಢವಾಗುವ ಪ್ರಮಾಣ 2 ಸಾವಿರಕ್ಕಿಂತ ಕಡಿಮೆಯಾಗಿದೆ. ಜು.7ರಂದು 1,498 ಸೋಂಕಿತರು ಪತ್ತೆಯಾಗಿದ್ದು, 2 ಸಾವಿರಕ್ಕಿಂತ ಕಡಿಮೆ ಪ್ರಕರಣ ವರದಿಯಾದ ದಿನವಾಗಿತ್ತು. ಅದರ ನಂತರ, ಸತತ 4 ತಿಂಗಳು ಸೋಂಕಿತರ ಸಂಖ್ಯೆ 2 ಸಾವಿರದಿಂದ 11 ಸಾವಿರ ಗಡಿವರೆಗೂ ಏರಿಕೆಯಾಗಿ ಈಗ ಇಳಿಮುಖವಾಗಿದೆ.

ಸೋಮವಾರ 2,686 ಮಂದಿ ಸೋಂಕಿನಿಂದ ಗುಣರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 8,04,485ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಸಂಖ್ಯೆ 8,48,850 ಆಗಿದ್ದು, ಇದರಲ್ಲಿ 32,936 ಸಕ್ರಿಯ ಪ್ರಕರಣಗಳಿವೆ. 19 ಮಂದಿ ಬಲಿಯಾಗುವ ಮೂಲಕ ಒಟ್ಟು ಕರೊನಾ ಮೃತರ ಸಂಖ್ಯೆ 11,410ಕ್ಕೆ ತಲುಪಿದೆ. 876 ಸೋಂಕಿತರು ಐಸಿಯುನಲ್ಲಿದ್ದಾರೆ.

ಲಕ್ಷಕ್ಕಿಂತ ಕಡಿಮೆ ಪರೀಕ್ಷೆ: ಕಳೆದ ಒಂದು ತಿಂಗಳಿಂದ 1 ಲಕ್ಷಕ್ಕಿಂತ ಅಧಿಕ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಸೋಮವಾರ 15,457 ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮತ್ತು 69,508 ಆರ್‌ಟಿ-ಪಿಸಿಆರ್ ಟೆಸ್ಟ್ ಸೇಸರಿ ಒಟ್ಟು 84,945 ಕೋವಿಡ್ ಪರೀಕ್ಷೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net