ದ.ಕದಲ್ಲಿ 4,546 ಮಂದಿಗೆ ಲಸಿಕೆ

Covid 11
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 1,162 ಮಂದಿ ಪ್ರಥಮ ಡೋಸ್, 3,384 ಮಂದಿ ದ್ವಿತೀಯ ಡೋಸ್ ಒಟ್ಟು 4,546 ಮಂದಿ ಲಸಿಕೆ ಪಡೆದಿದ್ದಾರೆ.

60 ವರ್ಷ ಮೇಲ್ಪಟ್ಟ 164 ಮಂದಿ ಮೊದಲನೇ ಡೋಸ್ ಮತ್ತು 202 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಒಬ್ಬರು ಹೆಲ್ತ್ ವರ್ಕರ್ಸ್‌ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 7 ಮಂದಿ ್ರಂಟ್‌ಲೈನ್ ವರ್ಕರ್ಸ್‌ ಎರಡನೇ ಡೋಸ್, 45ರಿಂದ 60 ವರ್ಷದೊಳಗಿನ 177 ಮಂದಿ ಮೊದಲನೇ ಡೋಸ್, 643 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

18 ವರ್ಷದಿಂದ 44 ವರ್ಷದೊಳಗಿನ 821 ಮಂದಿ ಮೊದಲನೇ ಡೋಸ್ ಮತ್ತು 2,531 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net