ಉಡುಪಿಯಲ್ಲಿ 170 ಪಾಸಿಟಿವ್

Covid 19 Birth
Published on

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 170 ಮಂದಿಗೆ ಕರೊನಾ ಪಾಸಿಟಿವ್ ಬಂದಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ನೆಗೆಟಿವ್ ವರದಿಗಳು ಬರುತ್ತಿವೆ. ಉಡುಪಿಯ 74 , ಕುಂದಾಪುರದ 55, ಕಾರ್ಕಳದ 39 ಸೇರಿದಂತೆ 2 ಹೊರ ಜಿಲ್ಲೆಯವರು ಸೋಂಕಿತರು.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4970ಕ್ಕೆ ಏರಿಕೆಯಾಗಿದೆ. 136 ಮಂದಿ ಸೋಂಕಿನಿಂದ ಗುಣವಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 1352 ಮಂದಿಯ ವರದಿ ನೆಗೆಟಿವ್ ಬಂದಿದೆ. ಇದುವರೆಗೆ 2948 ಮಂದಿ ಸೋಂಕುಮುಕ್ತರಾಗಿದ್ದಾರೆ. 1980 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಇದುವರೆಗೆ 42 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್-19 ರ‌್ಯಾಂಡಂ ಪರೀಕ್ಷೆ ಚುರುಕುಗೊಂಡಿದ್ದು, ಮಂಗಳವಾರ 1700 ಮಂದಿಯ ಗಂಟಲದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಈಗಾಗಲೇ ಕಳಿಸಿದ್ದ ಮಾದರಿಯಲ್ಲಿ 704 ಮಂದಿಯ ವರದಿ ಬಾಕಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net