ಕೋವಿಡ್ ತಡೆಗೆ ಸಹಕಾರ ನೀಡಿ

Untitled-3
Published on

ತೆಲಸಂಗ: ಕ್ವಾರಂಟೈನ್ ಮುಗಿದಿದೆ ಎಂದು ಹೊರಗಡೆ ಸಂಚರಿಸದೇ ಇನ್ನೂ ಏಳು ದಿನ ಮನೆಯಲ್ಲಿಯೇ ಇದ್ದು ಸಹಕರಿಸಿ, ಕರೊನಾ ವೈರಸ್ ನಿಯಂತ್ರಿಸಲು ದಯವಿಟ್ಟು ಸ್ವಯಂ ನಿರ್ಬಂಧ ಹೇರಿಕೊಳ್ಳಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ್ ಹೇಳಿದರು.

ಗುರುವಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 14 ದಿನ 23 ಕಾರ್ಮಿಕರು ಕ್ವಾರಂಟೈನ್ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಅವರನ್ನುದ್ದೇಶಿಸಿ ಮಾತನಾಡಿದರು. ನಮ್ಮ ಕಾರ್ಯಕ್ಕಿಂತ ನಿಮ್ಮ ಸಹಕಾರ ನಮಗೆ ಮುಖ್ಯವಾಗಿದೆ. ಯಾರಾದರೂ ನಿಯಮ ಮೀರಿ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.

ಬೇರೆ ರಾಜ್ಯದಿಂದ ಅಕ್ರಮವಾಗಿ ನುಸುಳಿ ರಾಜ್ಯ ಪ್ರವೇಶಿಸಿದರೆ ಅಂತವರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಬೇಕು ಎಂದರು. ಗ್ರಾಮ ಲೆಕ್ಕಾಧಿಕಾರಿ ಬಿ.ಜಿ. ಇರಕರ್, ಪಿಡಿಒ ಬೀರಪ್ಪ ಕಡಗಂಚಿ, ವೈದ್ಯಾಧಿಕಾರಿ ಡಾ. ವಾಸಂತಿ, ಮುಖ್ಯ ಶಿಕ್ಷಕ ಬಿ.ಎಚ್. ಶೆಲ್ಲೆಪ್ಪಗೋಳ ಇತರರು ಇದ್ದರು. ಬಂಗಾರೆಪ್ಪನವರ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net