ಕೋವಿಡ್ ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡಿ

190920 Karatagi Bharat Community Party Appeal
Published on

ಕಾರಟಗಿ: ಕೋವಿಡ್ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ಹಾಗೂ ಗುಣಮಟ್ಟದ ಆಹಾರ ಓದಗಿಸುವಂತೆ ಆಗ್ರಹಿಸಿ ಶಿರಸ್ತೇದಾರ್ ಸಾವಿತ್ರಿಗೆ ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಸಮಿತಿ ಪದಾಧಿಕಾರಿಗಳು ಪಟ್ಟಣದಲ್ಲಿ ಶನಿವಾರ ಮನವಿ ಸಲ್ಲಿಸಿದರು.

ಆದಾಯ ತೆರಿಗೆ ವ್ಯಾಪ್ತಿಗೆ ಸೇರಿದ ಎಲ್ಲ ಬಡ ಕುಟುಂಬಗಳಿಗೆ ಮುಂದಿನ ಆರು ತಿಂಗಳು ಮಾಸಿಕ 7,500 ರೂ. ಸಹಾಯ ಧನ ನೀಡಬೇಕು. ಬಡ ಕುಟುಂಬಗಳಿಗೆ ಆರು ತಿಂಗಳು ಕಾಲ ಪ್ರತಿ ತಿಂಗಳು 10 ಕೆಜಿ ಅಕ್ಕಿ ಸೇರಿ ಪಡಿತರವನ್ನು ಉಚಿತವಾಗಿ ಪೂರೈಸಬೇಕು. ವರ್ಷದ 100 ದಿನಗಳ ಬದಲಾಗಿ 200 ದಿನಗಳ ಕಾಲ ಗ್ರಾಮೀಣ ಉದ್ಯೋಗ ಒದಗಿಸುವ ಜತೆಗೆ ದಿನಗೂಲಿ 600ಕ್ಕೆ ಹೆಚ್ಚಿಸಬೇಕು. ವಿಳಂಬ ಮಾಡದೆ ನಗರಪ್ರದೇಶಗಳಿಗೂ ಅನ್ವಯವಾಗುವಂತೆ ಉದ್ಯೋಗಖಾತ್ರಿ ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಬಡ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಪಡೆಯಲು ಸಹಕಾರಿಯಾಗಲು ಸ್ಮಾರ್ಟ್ ಫೋನ್ ಮತ್ತು ಇತರೆ ಪರಿಕರಣಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ, ತಾಲೂಕಾಧ್ಯಕ್ಷ ಎಂ. ಬಸವರಾಜ, ಪದಾಧಿಕಾರಿಗಳಾದ ಹುಸೇನಪ್ಪ, ಶರಣಪ್ಪ, ಈರಪ್ಪ, ಮಲ್ಲಮ್ಮ, ಹುಲಿಗೆಮ್ಮ, ಮಾಯಮ್ಮ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net