ದ.ಕ.ದಲ್ಲಿ 273, ಉಡುಪಿಯಲ್ಲಿ 81 ಸೋಂಕಿತರು

covid
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 273(ಪಾಸಿಟಿವಿಟಿ ಪ್ರಮಾಣ ಶೇ.3.52) ಮಂದಿಯಲ್ಲಿ ಕರೊನಾ ಸೋಂಕು ದೃಡಪಟ್ಟಿದೆ. ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮೃತಪಟ್ಟಿದ್ದಾರೆ. 364 ಮಂದಿ ಸೋಂಕುಮುಕ್ತರಾಗಿದ್ದಾರೆ. ಸೋಂಕು ದೃಢಪಟ್ಟ 3,321ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ಕಡೆ ಅಧಿಕ ಸೋಂಕಿತರು ಇರುವ ಮಂಗಳೂರು ಮತ್ತು ಪುತ್ತೂರಿನಲ್ಲಿ ತಲಾ ಎರಡು ಮತ್ತು ಬೆಳ್ತಂಗಡಿಯಲ್ಲಿ ಐದು ಕಂಟೇನ್ಮೆಂಟ್ ವಲಯಗಳನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಪಟ್ಟ 3,925 ಜನರಲ್ಲಿ 81 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಲ್ಲಿ ಚಿಕಿತ್ಸೆಗಾಗಿ 17 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 193 ಮಂದಿ ಕೋವಿಡ್‌ನಿಂದ ಗುಣವಾಗಿದ್ದಾರೆ. 1,289 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net