ಕೋವಿಡ್​ ಅಕ್ರಮ ಮತ್ತು 40% ಕಮಿಷನ್​ ತನಿಖೆ ತಾರ್ಕಿಕ ಅಂತ್ಯ: ದಿನೇಶ ಗುಂಡೂರಾವ್​

dinesh_vb_84
Published on

ವಿಜಯವಾಣಿ ಸುದ್ದಿಜಾಲ ಗದಗ
ಕೋವಿಡ್​ ಅಕ್ರಮ ಹಾಗೂ ಹಿಂದಿನ ಸರ್ಕಾರದ 40% ಕಮಿಷನ್​ ತನಿಖೆಯು ದ್ವೇಷದಿಂದ ಕೈಗೊಂಡಿದ್ದಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಕೈಗೊಳ್ಳಲಾಗಿದೆ. ತನಿಖೆಯನ್ನು ತಾರ್ಕಿಕ ಅಂತ್ಯಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.
ಐಎಂಎ ಸಮ್ಮೇಳನ ಉದ್ಘಾಟಿಸಲು ಗದಗ ನಗರಕ್ಕೆ ಭಾನುವಾರ ಆಗಮಿಸಿದ್ದ ಸಚಿವ ಗುಂಡೂರಾವ್​, ಕೋವಿಡ್​ ಅಕ್ರಮ ಹಾಗೂ 40% ಕಮಿಷನ್​ ಕುರಿತು ಸಾರ್ವಜನಿಕ ಲೆಕ್ಕ ಪತ್ರ ವರದಿಯನ್ನು ಹಿಂದಿನ ಸರ್ಕಾರ ಸದನಕ್ಕೆ ಒಪ್ಪಿಸಿರಲಿಲ್ಲ. ವರದಿ ಆಧಾರದಲ್ಲಿ ಹಾಗೂ ಇತರೆ ಮಾಹಿತಿ ಆಧಾರದ ಮೇಲೆ ತನಿಕೆಗೆ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆ ನಿವೃತ್ತ ಹೈಕೋರ್ಟ್​ ನ್ಯಾ. ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ ಎಂದರು.
ತನಿಖೆಗೆ ಆದೇಶಿಸಿದ ಹಿನ್ನೆಲೆ ಬಿಜೆಪಿ ಮುಖಂಡರಿಗೆ ಭಯ ಶುರುವಾಗಿದೆ. ತನಿಖೆಯನು ವಿರೋಧ ಪಕ್ಷಗಳು ಸ್ವಾಗತಿಸಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿನ ಬಿಬಿಎಂಪಿ ಹಗರಣಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.

ರಾಜ್ಯ ನಾಯಕರ ಬಗ್ಗೆ ಅಸಡ್ಡೆ:
ಇಸ್ರೋಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ನಾಯಕರ ಬಗ್ಗೆ ತೋರಿದ ಅಸಡ್ಡೆಯಿಂದ ರಾಜ್ಯ ಬಿಜೆಪಿ ನಾಯಕರ ಮೇಲೆ ಪ್ರಧಾನಿ ಮೋದಿ ಅವರಿಗೆ ಇರುವ ಅಸಡ್ಡೆ ಸ್ಪಷ್ಟವಾಗಿ ಘೊಚರಿಸಿದೆ. ಇವರಿಗಾದರೂ ಸ್ವಾಭಿಮಾನ ಇರಬೇಕಲ್ಲವೇ ಎಂದು ದಿನೇಶ್​ ಗುಂಡೂರಾವ್​ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net