ಹಣ ಕೊಡದಿದ್ದಕ್ಕೆ ಪಾದಚಾರಿ ಮಾರ್ಗದಲ್ಲಿ ಶವ ಇಟ್ಟು ಪರಾರಿ; ಆಂಬುಲೆನ್ಸ್​ ಚಾಲಕನ ಸೆರೆ

20210528_165931_600x400
Published on

ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟ ಶವ ಸಾಗಿಸಲು 18 ಸಾವಿರ ರೂ. ಕೊಡದ ಕಾರಣಕ್ಕೆ ಶವವನ್ನು ಪಾದಚಾರಿ ಮಾರ್ಗದಲ್ಲಿ ಇಟ್ಟು ಹೋಗಿದ್ದ ಆಂಬುಲೆನ್ಸ್​ ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಶರತ್​ ಬಂಧಿತ ಚಾಲಕ. ಗುರುವಾರ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಿಸದೆ ರೋಗಿ ಮೃತಪಟ್ಟಿದ್ದರು. ಶವವನ್ನು ಹೆಬ್ಬಾಳದ ಚಿತಾಗಾರಕ್ಕೆ ಆಂಬುಲೆನ್ಸ್​ನಲ್ಲಿ ತೆಗೆದುಕೊಂಡು ಬಂದಿದ್ದ. 18 ಸಾವಿರ ರೂ. ಕೊಡುವಂತೆ ಮೃತರ ಸಂಬಂಧಿಕರ ಬಳಿ ಬೇಡಿಕೆ ಇಟ್ಟಿದ್ದ.

ಇದಕ್ಕೆ ಒಪ್ಪದೆ ಇದ್ದಾಗ ಚಾಲಕ, ವಾಹನದಲ್ಲಿದ್ದ ಶವವನ್ನು ಪಾದಚಾರಿ ಮಾರ್ಗದಲ್ಲಿ ಇಟ್ಟು ಪರಾರಿ ಆಗಿದ್ದ. ಈ ಕುರಿತು ಮೃತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net