ಉಡುಪಿಯಲ್ಲಿ 2 ಸಾವಿರ ಗಡಿ ದಾಟಿದ ಕರೊನಾ

Covid
Published on

ಉಡುಪಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟಿದೆ. ದಿನವೊಂದರ ಸೋಂಕಿತರ ಸಂಖ್ಯೆ ಮತ್ತೆ ಶತಕ ದಾಟಿದ್ದು, ಶನಿವಾರ ಒಂದೇ ದಿನ 109 ಪ್ರಕರಣ ಪತ್ತೆಯಾಗಿದೆ, ಒಂದು ಸಾವು ವರದಿಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಹಾಗೂ ಪಾಸಿಟಿವ್ ಸಂಖ್ಯೆ 2088ಕ್ಕೆ ಏರಿಕೆಯಾಗಿದೆ.

ಹೊಸ ಸೋಂಕಿತರಲ್ಲಿ ಉಡುಪಿ ತಾಲೂಕಿನ 58, ಕುಂದಾಪುರ ತಾಲೂಕಿನ 40, ಕಾರ್ಕಳದ 11 ಜನರಿದ್ದು, ಇದರಲ್ಲಿ 7 ಮಕ್ಕಳು, 63 ಪುರುಷರು, 39 ಮಹಿಳೆಯರಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ 292 ವರದಿ ನೆಗೆಟಿವ್ ಬಂದಿದೆ. 524 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 537 ವರದಿ ಬರಲು ಬಾಕಿ ಇದೆ. ಇಲ್ಲಿವರೆಗೆ 1586 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 492 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net