

ಚಿತ್ರದುರ್ಗ: ರಕ್ತ ದಾನದಿಂದ ದೇಹದ ಶಕ್ತಿ ಕುಂದುವುದಿಲ್ಲವೆಂಬ ಜಾಗೃತಿಯನ್ನು ಯುವಕರು ಜನರಲ್ಲಿ ಮೂಡಿಸಲು ಮುಂದಾಗಬೇಕೆಂದು ವೈದ್ಯ,ಬಿಜೆಪಿ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಫಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17ರಿಂದ ಅ.2ರವರೆಗೆ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕ ಕಾರ‌್ಯ ಕ್ರಮದಡಿ ಬಿಜೆಪಿ ಯುವ ಮೋರ್ಚಾದಿಂದ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು,ರಕ್ತದಾನದಿಂದ ನಿಶ್ಯಕ್ತಿಯಾಗುತ್ತದೆ ಎಂಬುದು ತಪ್ಪು ಕಲ್ಪನೆ.
ನಿರಂತರ ರಕ್ತದಾನಕ್ಕೆ ಸೂಕ್ತ ಜಾಗೃತಿಯ ಅಗತ್ಯವಿದೆ. ಕೊರನಾ ಕಾರಣಕ್ಕೆ ಕಳೆದ 2 ವರ್ಷಗಳಿಂದ ರಕ್ತಕ್ಕೆ ಕೊರತೆಯಾಗಿತ್ತು. ಈಗ ಡೆಂೇ ಭೀತಿ ಇದ್ದು,ರಕ್ತದ ಅಗತ್ಯತೆ ಹೆಚ್ಚಾಗಿದೆ.ಅಪಘಾತ, ಹೆರಿಗೆ,ಆಪರೇಷನ್ ಇತ್ಯಾದಿ ಸಂದರ್ಭಗಳಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆಯಿರುವುದರಿಂದ ರಕ್ತದಾನಕ್ಕೆ ಎಲ್ಲರೂ ಮನಸ್ಸು ಮಾಡಬೇಕೆಂದು ವಿನಂತಿಸಿದರು.
ಭೀಮಸಮುದ್ರದ ಜಿ.ಎಸ್.ಅನಿತ್‌ಕುಮಾರ್ ಮಾತನಾಡಿ,ರಕ್ತದಾನದಿಂದ ಜೀವ ಉಳಿಯುತ್ತದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,ನವೀನ್ ಚಾಲುಕ್ಯ,ಕೆ.ಶ್ರೀರಾಮು,ನರೇಂದ್ರ,ಸಂಪತ್,ಕೃಷ್ಣ,ಶೈಲಜಾರೆಡ್ಡಿ,ಮಾಧುರಿಗಿರೀಶ್,ಚಂದ್ರಿಕಾಲೋಕನಾಥ್, ಗೀತಮ್ಮ,ಶೀಲಾ ಶ್ರೀನಿವಾಸ್,ಶಾಂತಮ್ಮ,ಗೀತಮ್ಮ ಮತ್ತಿತರರು ಇದ್ದರು.