ಸೋಂಕು ಗುಣಮುಖ ಪ್ರಕರಣ ಹೆಚ್ಚಳ : 4,215 ಮಂದಿ ಸೋಂಕು ಮುಕ್ತ, 20 ಸಾವು

corona
Published on

ಬೆಂಗಳೂರು : ರಾಜ್ಯದಲ್ಲಿ ಸತತ 5 ದಿನಗಳಿಂದ ಸೋಂಕು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದವು. ಆದರೆ, ಮಂಗಳವಾರ 4,215 ಮಂದಿ ಸೋಂಕು ಮುಕ್ತರಾಗುವ ಮೂಲಕ, ಗುಣಮುಖ ಪ್ರಕರಣಗಳು ಅಧಿಕವಾಗಿ ವರದಿಯಾಗಿವೆ. ಒಟ್ಟು ಆಸ್ಪತ್ರೆಯಿಂದ ಬಿಡುಗಡೆ ಆದವರ ಸಂಖ್ಯೆ 8,08,700ಕ್ಕೆ ತಲುಪಿದೆ.

ಹೊಸದಾಗಿ 2,362 ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,51,212ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಗದಿತ ಆಸ್ಪತ್ರೆ, ಆರೈಕೆ ಕೇಂದ್ರ ಮತ್ತು ಮನೆ ನಿಗಾದಲ್ಲಿ 31,063 ಮಂದಿ ಸಕ್ರಿಯ ಪ್ರಕರಣ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 869 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಮಂಗಳವಾರ ಒಂದೇ ದಿನ 20 ಮಂದಿ ಸೋಂಕಿಗೆ ಬಲಿಯಾಗುವ ಮೂಲಕ, ಒಟ್ಟು ಸೋಂಕಿನಿಂದ ಸಾವನ್ನಪ್ಪಿದ ಪ್ರಕರಣ 11,430ಕ್ಕೆ ತಲುಪಿದೆ.

48,384 ಹೋಂ ಕ್ವಾರಂಟೈನ್: ರಾಜ್ಯದ 30 ಜಿಲ್ಲೆಗಳಲ್ಲಿ ಲಕ್ಷಣಗಳಿಲ್ಲದ ಸೋಂಕಿತರು, ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಸೇರಿ ಒಟ್ಟು 48,384 ಮಂದಿ ಕಳೆದ ಏಳು ದಿನಗಳಿಂದ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಕಳೆದ 14 ದಿನಗಳಲ್ಲಿ ಪ್ರಾಥಮಿಕ ಸಂಪರ್ಕದ 2,21,977 ಮತ್ತು ದ್ವಿತೀಯ ಸಂಪರ್ಕದ 2,31,301 ಜನರನ್ನು ಮತ್ತೆ ಮಾಡಲಾಗಿದೆ. ಮಂಗಳವಾರ 78,594 ಆರ್‌ಟಿ-ಪಿಸಿಆರ್ ಪರೀಕ್ಷೆ ಹಾಗೂ 30,914 ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಸೇರಿ ಒಟ್ಟು 1,09,508 ಕೋವಿಡ್ ಪರೀಕ್ಷೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net