

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾನುವಾರ 42 ಜನರಿಗೆ ಕರೊನಾ ಪಾಸಿಟಿವ್ ಕಂಡುಬಂದಿದ್ದು, ಮೂವರು ಮತಪಟ್ಟಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 690 ತಲುಪಿದ್ದು, ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.
30 ಸಕ್ರಿಯ ಪ್ರಕರಣ 30 ಸಕ್ರಿಯ ಪ್ರಕರಣ: ಭಾನುವಾರ 28 ಜನರು ಸೋಂಕು ಮುಕ್ತರಾಗಿದ್ದು, ಒಟ್ಟಾರೆ 327 ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ. 330 ಸಕ್ರಿಯ ಪ್ರಕರಣಗಳಿದ್ದು, ಆರು ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 700ರ ಗಡಿಯಲ್ಲಿದೆ.
ಮಹಾರಾಷ್ಟ್ರದಿಂದ ಬಂದ 3, ತಮಿಳುನಾಡಿನಿಂದ ಬಂದ 1, ಮೈಸೂರಿನಿಂದ ಆಗಮಿಸಿದ 2, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 2, ಸೋಂಕು ಲಕ್ಷಣ ಅನಾರೋಗ್ಯದ 8, ಪ್ರಾಥಮಿಕ ಸಂಪರ್ಕದ 10 ಹಾಗೂ ವಿದೇಶಗಳಿಂದ ಆಗಮಿಸಿದ 14 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದ ಇಬ್ಬರಿಗೆ ಸೋಂಕಿತರ ಬಗ್ಗೆ ಮಾಹಿತಿ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಆದರೆ ಹೊಸದಾಗಿ ಪೊಲೀಸರು, ಬಿಎಂಟಿಸಿ ಸಿಬ್ಬಂದಿ ಹಾಗೂ ನಿಮ್ಹಾನ್ಸ್ ಸ್ವಚ್ಛತಾ ಸಿಬ್ಬಂದಿಗೆಗೆ ಸೋಂಕು ಪತ್ತೆಯಾಗಿದ್ದು, ರಾಜ್ಯದ ಬುಲೆಟಿನ್ನಲ್ಲಿ ನಮೂದಾಗಿಲ್ಲ.
ಸೋಂಕಿಗೆ ಮೂವರ ಬಲಿ
ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 57 ವರ್ಷದ ಹಾಗೂ 60 ವರ್ಷದ ಮಹಿಳೆಯರಿಬ್ಬರು ಮೃತಪಟ್ಟಿದ್ದಾರೆ. ಇನ್ನು, ತಮಿಳುನಾಡಿನಿಂದ ಬಂದಿದ್ದ 50 ವರ್ಷದ ವ್ಯಕ್ತಿಯು ಜ್ವರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆವರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಒಟ್ಟಾರೆ ಮೃತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿನಿಂದ ಮೃತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ವೈದ್ಯರು ಮಾತ್ರ ನಿತ್ಯ 2ರಿಂದ ಮೂರು ಪ್ರಕರಣಗಳನ್ನು ರಾಜ್ಯ ಸರ್ಕಾರದ ಬುಲೆಟಿನ್ಗೆ ನೀಡುತ್ತಿದ್ದಾರೆ.
ಕಂಟೇನ್ಮೆಂಟ್ನಲ್ಲಿ ಭಾರಿ ಏರಿಕೆ
ಅನಾರೋಗ್ಯ ಹಾಗೂ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್ ಪ್ರದೇಶಗಳ 142ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಜೂ.10ರವರೆಗೆ ಕಂಡುಬಂದ ಸೋಂಕಿತರ ಪ್ರದೇಶಗಳನ್ನು ಮಾತ್ರ ಕಂಟೇನ್ಮೆಂಟ್ ಮಾಡಲಾಗಿದ್ದು, ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಸಿಸಿಬಿ ಮುಖ್ಯಪೇದೆಗೂ ಕೋವಿಡ್