ಐಸಿಯು ಚಿಕಿತ್ಸೆ ಪಡೆವ ಪ್ರಕರಣ ಶೇ.1ಕ್ಕೆ ಇಳಿಕೆ : 18,319 ಸಕ್ರಿಯ ಪ್ರಕರಣ

Covid Test
Published on

ಬೆಂಗಳೂರು : ರಾಜಧಾನಿಯಲ್ಲಿ 18,319 ಕರೊನಾ ಸಕ್ರಿಯ ಸೋಂಕಿತರಲ್ಲಿ ಕೇವಲ 184 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಐಸಿಯು ಚಿಕಿತ್ಸೆ ಪಡೆಯುವ ಪ್ರಕರಣಗಳು ಶೇ.1ಕ್ಕೆ ಇಳಿಕೆಯಾಗಿವೆ.

ಜನರು ಸೋಂಕಿನ ಲಕ್ಷಣ ಕಂಡುಬಂದ ಕೂಡಲೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಐಸಿಯುಗೆ ದಾಖಲಾಗುವ ಪ್ರಕರಣಗಳು ಕಡಿಮೆಯಾಗಿವೆ. ಇದರಿಂದ ಕೋವಿಡ್ ಸಾವು ಮತ್ತಷ್ಟು ಇಳಿಮುಖವಾಗುವ ನಿರೀಕ್ಷೆಯಿದೆ. ಭಾನುವಾರ 686 ಹೊಸ ಕರೊನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,69,290ಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ 723 ಮಂದಿ ಗುಣಮುಖರಾಗಿದ್ದು, ಒಟ್ಟು 3,46,839 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾನುವಾರ 10 ಮಂದಿ ಕರೊನಾಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 4,131ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net