ಅ.17ಕ್ಕೆ ಮಳಲಿ ಮಸೀದಿ ತೀರ್ಪು

Court
Published on

ಮಂಗಳೂರು: ಹಿಂದು ವಾಸ್ತುಶೈಲಿಯ ವಸ್ತುಗಳು ಪತ್ತೆಯಾಗಿ ವಿವಾದಕ್ಕೆಡೆಯಾಗಿದ್ದ ಮಳಲಿ ಮಸೀದಿಯ ಕುರಿತ ತೀರ್ಪನ್ನು ಮಂಗಳೂರು ಸಿವಿಲ್ ಕೋರ್ಟ್ ಮಂಗಳವಾರ ಅ.17ಕ್ಕೆ ಕಾಯ್ದಿರಿಸಿದೆ.

ಕೆಲ ತಿಂಗಳ ಹಿಂದೆ ಮಳಲಿ ಮಸೀದಿ ಜೀರ್ಣೋದ್ಧಾರ ಸಂದರ್ಭ ಹಿಂದೂ ವಾಸ್ತುಶೈಲಿಯ ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಮಸೀದಿಯ ಪರ ವಕೀಲರು, ಮಸೀದಿಯ ಜಾಗ ವಕ್ಫೃ್ ಆಸ್ತಿ ಆಗಿರುವುದರಿಂದ ಸಿವಿಲ್ ಕೋರ್ಟ್‌ಗೆ ವಿಚಾರಣೆ ಅಧಿಕಾರವಿಲ್ಲ ಎಂದು ವಾದಿಸಿದ್ದರು.

ಈ ಅಧಿಕಾರ ವ್ಯಾಪ್ತಿಯ ಕುರಿತಾದ ತೀರ್ಪು ಮಂಗಳವಾರಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಅ.17ಕ್ಕೆ ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net