ಬಿಜೆಪಿಯ ಐವರಿಗೆ ಕೋರ್ಟ್ ನಿಂದ ನೋಟಿಸ್

Published on

ಬಳ್ಳಾರಿ ; ರಾಜ್ಯ ಸರ್ಕಾರದ ಲೋಪದೋಷದ ವೈಫಲ್ಯ ಖಂಡಿಸಿ ನಗರದಲ್ಲಿ ಪ್ರತಿಭಟಿಸಿದ್ದ ಬಿಜೆಪಿಯ ಜಿಲ್ಲಾಧ್ಯಕ್ಷ ಸೇರಿ ಐವರಿಗೆ ಕೋರ್ಟ್‌ನಿಂದ ನೋಟಿಸ್ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಕಾರ್ಯದರ್ಶಿ ಕೆ.ಮಲ್ಲೇಶ್‌ಕುಮಾರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗುರುಲಿಂಗನೌಡ, ಮುಖಂಡರಾದ ಅಡವಿಸ್ವಾಮಿ, ರಾಮಲಿಂಗಪ್ಪ ಸೇರಿ ಐವರಿಗೆ ಕೋರ್ಟ್ ನಿಂದ ನೋಟಿಸ್ ಕಳುಹಿಸಲಾಗಿದೆ. ನಗರದಲ್ಲಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ, ವಿಧಾನಸಭೆಯಲ್ಲಿ ರಾಜ್ಯಸಭೆ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್ ಬೆಂಬಲಿಗನ ‘ ಪಾಕಿಸ್ತಾನ ಜಿಂದಾಬಾದ್ ’ ಘೋಷಣೆ ಪ್ರಕರಣ ಸೇರಿದಂತೆ ವಿಪಕ್ಷ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಂದ ಸರಣಿ ಪ್ರತಿಭಟನೆ ನಡೆಸಲಾಗಿತ್ತು.

ಬಿಜೆಪಿ ಸರಣಿ ಪ್ರತಿಭಟನೆ ವೇಳೆ ಆಗ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಬಾಹಿರವಾಗಿ ರಸ್ತೆ ತಡೆ ನಡೆಸಿದ್ದಲ್ಲದೇ ಶಾಂತಿ ಕದಡಿದ್ದೀರಿ ಎಂಬ ಕಾರಣಕ್ಕೆ ಐವರ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನೋಟಿಸ್ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net