

ಶಿರಾ: ನಗರಸಭೆ ಸ್ಥಾಯಿಸಮಿತಿ ರಚನೆಗೆ ಜೆಎಂಎಫ್‌ಸಿ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಹಜ್‌ಯಾತ್ರೆಗೆ ತೆರಳಿರುವ ಸದಸ್ಯರೊಬ್ಬರ ಅನುಪಸ್ಥಿತಿಯಲ್ಲಿ ಸ್ಥಾಯಿಸಮಿತಿ ರಚನೆಗೆ ಅವಕಾಶ ನೀಡದಂತೆ ಕಾಂಗ್ರೆಸ್ ಸದಸ್ಯರು ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡಲಾಗಿದೆ.
ಹಾಗಾಗಿ, ಗುರುವಾರ ಕರೆಯಲಾಗಿದ್ದ ನಗರಸಭೆಯ ಸಾಮಾನ್ಯ ಸಭೆಯನ್ನೇ ರದ್ದುಪಡಿಸಿದ ಘಟನೆ ನಗರಸಭೆ ಇತಿಹಾಸದಲ್ಲಿ ದಾಖಲಾಯಿತು.
ಹಜ್‌ಯಾತ್ರೆಗೆ ತೆರಳಿರುವ ರೆಹನಾಖಾನಂ ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಕಾಂಗ್ರೆಸ್ ಸದಸ್ಯರು ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸ್ಥಾಯಿಸಮಿತಿ ಚುನಾವಣೆಯನ್ನು ಜು.30ರವರೆಗೆ ಮುಂದೂಡಲಾಗಿದೆ.