

ಗಜೇಂದ್ರಗಡ: ಪಟ್ಟಣದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ವಣಕ್ಕೆ ಗುರುತಿಸಲಾಗಿರುವ ಸ್ಥಳಕ್ಕೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಗದಗ ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ವಿ. ಶ್ರೀಶಾನಂದ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಜೇಂದ್ರಗಡದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ವಣಕ್ಕೆ ಈಗಾಗಲೇ 9.80 ಕೋಟಿ ರೂಪಾಯಿ ಮಂಜೂರಾಗಿದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ವಣದ ಕಾರ್ಯ ಆರಂಭಗೊಳ್ಳಲಿದೆ. ನ್ಯಾಯಾಲಯ, ಆಸ್ಪತ್ರೆ, ಶಾಲೆಗಳು ದೇವಾಲಯಗಳಿದ್ದಂತೆ. ಅವುಗಳ ನಿರ್ಮಾಣ ಕಾರ್ಯದಲ್ಲಿ ಶ್ರದ್ಧೆಯಿಂದ ಗುಣಮಟ್ಟದ ಕಾಮಗಾರಿ ನಡೆಸಬೇಕು. ಇದರಿಂದ ಮುಂದಿನ ಜೀವನ ಉತ್ತಮವಾಗುವುದರೊಂದಿಗೆ ನಿಮ್ಮ ಮಕ್ಕಳಿಗೆ ಪುಣ್ಯ ಲಭಿಸುತ್ತದೆ ಎಂದು ಇಂಜಿನಿಯರ್ಗಳಿಗೆ ತಿಳಿಸಿದರು. ವಕೀಲರಾದ ಬಿ.ಎಂ. ಸಜ್ಜನರ, ಆರ್.ಎಂ. ರಾಯಬಾಗಿ, ಸಿದ್ದು ಹಿಡ್ಕಿಮಠ, ಎಂ.ಎಚ್. ಕೋಲಕಾರ, ಎಂ.ಎಸ್. ಹಡಪದ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಪಿಎಸ್ಐ ಸೋಮನಗೌಡ ಗೌಡ್ರ, ಇತರರಿದ್ದರು.