

ಕಾಗವಾಡ: ನ್ಯಾಯಾಲಯದ ಕಟ್ಟಡ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅಂದಿನ ಎಪಿಎಂಸಿ ಸಚಿವ ಬಂಡೆಪ್ಪ ಕಾಶಪ್ಪನ್ನವರ ಅನುಮತಿ ನೀಡಿದ್ದರು. ಆದರೆ, ಕೆರೆ ಪಕ್ಕದ ಜಾಗ ಬರ್ ರೆನ್ ಎಂದು ಪರಿಗಣಿಸಿ ನ್ಯಾಯಾಲಯ ನಿರ್ಮಾಣಕ್ಕಾಗಿ ಅಡೆತಡೆಯಾಗಿ ನನೆಗುದಿಗೆ ಬಿದ್ದಿದೆ. ಸಮಸ್ಯೆ ಪರಿಹಾರಕ್ಕೆ ಶ್ರಮಿಸುವುದಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಎರಡನೇ ದಿನದ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಮಂಗಳವಾರ ಆಗಮಿಸಿ ಬೆಂಬಲ ಸೂಚಿಸಿ ಮಾತನಾಡಿದ ಅವರು, ಕಾಗವಾಡ ಬಹುಭಾಗ ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಅಷ್ಟಾಗಿ ಎಪಿಎಂಸಿ ಅಗತ್ಯತೆ ಇಲ್ಲ. ಹೀಗಾಗಿ, ಸರ್ಕಾರ ಎಪಿಎಂಸಿ ಬಳಿಯಿರುವ ಹೆಚ್ಚುವರಿ ಜಾಗವನ್ನು ನ್ಯಾಯಾಲಯ ಕಟ್ಟಡಕ್ಕೆ ನೀಡಬೇಕೆಂದು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಎ.ಮಾನೆ ಮಾತನಾಡಿ, ನಮಗೆ ನ್ಯಾಯ ದೊರೆಯದಿದ್ದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು. ತಾಲೂಕಿನ ಜುಗೂಳ, ಮಂಗಸೂಳಿ, ಉಗಾರ ಬಿಕೆ, ಕಾಗವಾಡ ಸೇರಿ ವಿವಿಧ ಗ್ರಾಮ ಪಂಚಾಯಿತಿ, ಪಿಕೆಪಿಎಸ್ ಸಂಘ, ದಲಿತ ಸಂಘಟನೆ, ರೈತ ಸೇವಾ ಸೊಸೈಟಿ, ಕಾರ್ಮಿಕ ಸಂಘಟನೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ವಕೀಲರ ಮುಷ್ಕರಕ್ಕೆ ಬೆಂಬಲ ಸೂಚಿಸಿದವು.
ರೈತ ಮುಖಂಡ ದಾದಾ ಪಾಟೀಲ, ಸಂಜಯ ತಳವಳಕರ, ಪಿಕೆಪಿಎಸ್ ಅಧ್ಯಕ್ಷರಾದ ಅಣ್ಣಾಸಾಹೇಬ ಪಾಟೀಲ, ಜ್ಯೋತಿಕುಮಾರ ಪಾಟೀಲ, ಶೀತಲ ಪಾಟೀಲ, ಗ್ರಾಪಂ ಅಧ್ಯಕ್ಷ ಕಾಕಾಸಾಹೇಬ ಪಾಟೀಲ, ಕಾರ್ಮಿಕ ಸಂಘದ ಅಧ್ಯಕ್ಷ ಅರುಣ ಜೋಶಿ, ರೈತ ಸೇವಾ ಸಂಘಟನೆ ಅಧ್ಯಕ್ಷ ಶಾಂತಿನಾಥ ಕರವ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎ.ಮಗದುಮ್, ಎಂ.ಜಿ. ವಡ್ಡರ, ಪಿ.ಎ.ಕಿರಣಗಿ,
ಎ.ಎ. ಪಾಟೀಲ, ಅಭಯ ಅಕಿವಾಟೆ, ಎಸ್.ಬಿ.ಪಾಟೀಲ, ವೈ.ಬಿ.ಯಡೂರೆ, ಎ.ಆರ್. ಪಾಟೀಲ, ಎಂ.ಎ.ಪಾಟೀಲ, ಎಂ.ಎಸ್. ಹೊನಕಾಂಬಳೆ, ಬಿ.ಎ.ಗಣೆ ಇತರರಿದ್ದರು.