ಪ್ರಿಯಕರನಿಂದ ದೇಹ ಸುಖದ ಜತೆಗೆ ಹಣ ಪೀಕಿದಳು, ಕೊನೆಗೆ ಪ್ರಾಣವನ್ನೇ ತೆಗೆದಳು!

murder case
Published on

ಚಿಕ್ಕಬಳ್ಳಾಪುರ: ಜಿಲ್ಲಾ ನ್ಯಾಯಾಲಯದ ಅಟೆಂಡರ್ ಆಗಿದ್ದ ಮೈಸೂರು ಮೂಲದ ನವೀನ್ ಕೊಲೆ ಪ್ರಕರಣ ಸಂಬಂಧ ಮೃತನ ಪ್ರಿಯತಮೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಈ ಕೊಲೆಯ ರೂವಾರಿಯೇ ವಕೀಲ. ಈತ ಮೃತನ ಪ್ರಿಯತಮೆಯ ಹಾಲಿ ಪ್ರಿಯಕರ!

ಆ.18ರಂದು ಪ್ರಶಾಂತನಗರದಲ್ಲಿ ನವೀನ್​ ವಾಸವಿದ್ದ ಬಾಡಿಗೆ ಮನೆಯಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯದ ಅಟೆಂಡರ್ ದೀಪಾ (35), ಈಕೆಯ ಹಾಲಿ ಪ್ರಿಯಕರ ನಲ್ಲಕದಿರೇನಹಳ್ಳಿಯ ವಕೀಲ ನವೀನ್ (42), ಅನಿಲ್ (39) ಮತ್ತು ಕೃಷ್ಣಮೂರ್ತಿ (41) ಎಂಬುವವರನ್ನು ಬಂಧಿಸಿದ್ದಾರೆ. ಮೊದಮೊದಲು ಅಟೆಂಟರ್​ ನವೀನ್ ಜತೆ ಸಲುಗೆಯಿಂದಲೇ ಇದ್ದ ದೀಪ, ಆತನೊಂದಿಗೆ ಅನೈತಿಕ ಸಂಬಂಧದ ಜತೆಗೆ ಹಣಕಾಸಿನ ವ್ಯವಹಾರನ್ನೂ ಇಟ್ಟಿಕೊಂಡಿದ್ದಳು ಎನ್ನಲಾಗಿದೆ. ಈ ರಹಸ್ಯ ಹೊರ ಬರುವ ಭಯದಲ್ಲಿ ಮತ್ತೊಬ್ಬ ಪ್ರಿಯಕರ ವಕೀಲ ​ನವೀನ್​ನ ಸಹಾಯ ಕೋರಿದ್ದಳು. ಮುಂದೆ ಆಗಿದ್ದೆಲ್ಲವೂ ದುರಂತ.

ನ್ಯಾಯಾಲಯದ ಅಟೆಂಡರ್ಸ್​ ನವೀನ್ ಮತ್ತು ದೀಪಾಳ ನಡುವೆ ವ್ಯವಹಾರಿಕ ಹಾಗೂ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ನಡುವೆ ವಕೀಲ ನವೀನ್​ ಜತೆಗೂ ದೀಪಾ ಸಲುಗೆಯಿಂದ ಇರುತ್ತಿದ್ದಳು. ಎರಡು ದೋಣಿ ಮೇಲೆ ಕಾಲಿಟ್ಟಿದ್ದ ದೀಪಾಳ ವರ್ತನೆಗೆ ಬೇಸತ್ತ ಅಟೆಂಡರ್​ ನವೀನ್, ತನ್ನ ದೀಪಾಳ ಜತೆ ಜಗಳವಾಡುತ್ತಿದ್ದ. ಅಲ್ಲದೆ ತನ್ನ ಬಳಿ ಪಡೆದ ಹಣ ವಾಪಸ್​ ಕೊಡು ಎಂದೂ ಪೀಡಿಸುತ್ತಿದ್ದ.

ವಕೀಲ ನವೀನ್                ಅನಿಲ್                       ಕೃಷ್ಣಮೂರ್ತಿ
ವಕೀಲ ನವೀನ್                ಅನಿಲ್                       ಕೃಷ್ಣಮೂರ್ತಿ

ಮಾಜಿ ಪ್ರಿಯಕರ ನವೀನ್​ ಹಣಕ್ಕಾಗಿ ಪೀಡಿಸುವ ಬಗ್ಗೆ ಹಾಲಿ ಪ್ರಿಯಕರ ನವೀನ್​ ಬಳಿ ದೀಪಾ ಅಳಲು ತೋಡಿಕೊಂಡಿದ್ದಳು. ದೀಪಾಳ ತಂಟೆಗೆ ಬಾರದಂತೆ ವಕೀಲ ಹಲವು ಬಾರಿ ಎಚ್ಚರಿಕೆಯನ್ನೂ ಕೊಟ್ಟಿದ್ದ. ಆದರೂ ಅಟೆಂಡರ್​ ಹಣಕ್ಕಾಗಿ ಪೀಡಿಸುತ್ತಿದ್ದ. ಕೊನೆಗೆ ಮಾತುಕತೆಯ ನೆಪದಲ್ಲಿ ಸುಫಾರಿ ಕೊಟ್ಟು ಅನಿಲ್ ಮತ್ತು ಕೃಷ್ಣಮೂರ್ತಿ ಎಂಬುವವರನ್ನು ಅಟೆಂಡರ್​ ಮನೆಗೆ ವಕೀಲ ಕಳುಹಿಸಿದ್ದ. ಈ ವೇಳೆ ಅವರಿಬ್ಬರೂ ದೀಪಾಳ ಮಾಜಿ ಪ್ರಿಯಕರನ್ನು ಥಳಿಸಿ, ಕತ್ತು ಹಿಸುಕಿ ಕೊಂದಿದ್ದರು.

ಕೆಲ ದಿಗಳಾದರೂ ಅಟೆಂಡರ್​ ನವೀನ್​ ಕೋರ್ಟ್​ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ವಿಚಾರಿಸಲೆಂದು ಆ.18ರಂದು ಪ್ರಶಾಂತನಗರದಲ್ಲಿ ಆತನಿದ್ದ ಬಾಡಿಗೆ ಮನೆಗೆ ಹೋದಾಗ ಶವ ಪತ್ತೆಯಾಗಿತ್ತು. ಕತ್ತಿಗೆ ಜೀನ್ಸ್ ಪ್ಯಾಂಟ್ ಮತ್ತು ಅಂಗಿ ಬಿಗಿದ ಸ್ಥಿತಿಯಲ್ಲಿ ಅಟೆಂಟರ್​ ನವೀನ್​ರ​ ಮೃತದೇಹ ಪತ್ತೆಯಾಗಿದ್ದರಿಂದ ಕೊಲೆ ಶಂಕೆ ವ್ಯಕ್ತವಾಗಿತ್ತು. ಕೊಲೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಇದು ಮೃತನ ಮಾಜಿ ಪ್ರೇಯಸಿ ಮತ್ತು ವಕೀಲನ ಕೃತ್ಯ ಎಂಬುದು ಬಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net