

ಕೊಪ್ಪಳ: ಗಂಗಾವತಿ ಹೆಚ್ಚುವರಿ ನ್ಯಾಯಾಲಯಕ್ಕೆ ವಿಶೇಷ ಪ್ರಕರಣಗಳ ಅಧಿಕಾರ ನೀಡಿದ್ದನ್ನು ಖಂಡಿಸಿ ಕೊಪ್ಪಳ ವಕೀಲರು ಬುಧವಾರ ಕಲಾಪ ಬಹಿಷ್ಕರಿಸಿದರು.
ಗಂಗಾವತಿ ಹೆಚ್ಚುವರಿ ಜಿಲ್ಲಾ ಕೋರ್ಟ್ಗೆ ಪೋಕ್ಸೋ, ಜಾತಿ ನಿಂದನೆ, ಭ್ರಷ್ಟಾಚಾರ, ಮಧ್ಯಸ್ಥಿಕೆ, ಗಣಿ ಸಂಬಂಧಿ ಪ್ರಕರಣಗಳು, ಎನ್ಡಿಪಿಎಸ್ ಪ್ರಕರಣ ವಿಚಾರಣೆ ಅಧಿಕಾರ ನೀಡಲಾಗಿದೆ. ಗಂಗಾವತಿ ವ್ಯಾಪ್ತಿ ಪ್ರಕರಣಗಳ ವಿಚಾರಣೆಗೆ ಅವಕಾಶ ನೀಡಿದ್ದು, ಜಿಲ್ಲಾ ಕೋರ್ಟ್ ನತೆಗೆ ಧಕ್ಕೆಯಾಗಲಿದೆ. ಈ ಮೊದಲು ಕೆಲವೊಂದು ಸಾಮಾನ್ಯ ಪ್ರಕರಣ ವಿಚಾರಣೆಗೆ ಅವಕಾಶವಿತ್ತು. ಸರ್ಕಾರ ಹೆಚ್ಚುವರಿ ಪ್ರರಕಣ ವಿಚಾರಣೆಗೆ ಅವಕಾಶ ನೀಡಿದ್ದನ್ನು ಜಿಲ್ಲಾ ವಕೀಲರ ಸಂ ತೀವ್ರವಾಗಿ ವಿರೋಧಿಸಿ, ಅಸಹಕಾರ ತೋರಿತು.
ಜಿಲ್ಲಾ ಕೇಂದ್ರದಲ್ಲಿ ಪ್ರಧಾನ ನ್ಯಾಯಾಧೀಶರು ಇರಲಿದ್ದಾರೆ. ಹೆಚ್ಚುವರಿ ಕೋರ್ಟ್ಗೆ ವಿಶೇಷ ಅಧಿಕಾರ ನೀಡಬಾರದು. ಜಿಲ್ಲಾ ಕೇಂದ್ರ ನ್ಯಾಯಾಲಯಕ್ಕೆ ವಿಶೇಷ ಪ್ರಕರಣಗಳ ವಿಚಾರಣೆ ಅಧಿಕಾರ ಇರಲಿ. ಗಂಗಾವತಿ ವಿಭಾಗದ ಪ್ರಕರಣಗಳು ಇನ್ನು ಮುಂದೆ ಗಂಗಾವತಿ ಕೋರ್ಟ್ನಲ್ಲಿಯೇ ಮುಂದುವರಿಯಲಿವೆ. ಹೆಚ್ಚುವರಿ ಕೋರ್ಟ್ ಶಾಶ್ವತವಲ್ಲ. ತಕ್ಷಣ ಕಾನೂನು ಇಲಾಖೆ ಆದೇಶ ವಾಪಸ್ ಪಡೆಯಲಿ. ಸರ್ಕಾರದ ಕ್ರಮ ಪ್ರಶ್ನಿಸಿ ಹೈ ಕೋರ್ಟ್ಗೆ ರಿಟ್ ಸಲ್ಲಿಸುವುದಾಗಿ ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ತಿಳಿಸಿದರು.