ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿಗಳು

kdr2 (4)
Published on

ಕಡೂರು: ಎರಡು ಪ್ರತ್ಯೇಕ ಪ್ರಕರಣದಡಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗಳು ಕಡೂರು ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಂದುಗೂಡಿದರು. ಹರ್ಷಿತ್‌ಕುಮಾರ್ ಮತ್ತು ಕೀರ್ತಾನ ಜೋಡಿಗಳ ನಡುವೆ ಸಂಸಾರಿಕ ಜಗಳದಿಂದ ಮನಸ್ತಾಪವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಮತ್ತೊಂದು ಪ್ರಕರಣದಲ್ಲಿ ಪ್ರಶಾಂತ್‌ನಾಯ್ಕ ಮತ್ತು ರಕ್ಷಿತಾ ಬಾಯಿ ಈ ಜೋಡಿಗಳ ನಡುವೆ ಕಲಹ ಏರ್ಪಟ್ಟು ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದ ಮೆಟ್ಟಿಲಿರಿದ್ದರು. ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಲೋಕಾ ಆದಾಲತ್‌ನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದ ಎರಡು ದಂಪತಿಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಇಬ್ಬರು ದಂಪತಿಗಳು ಪರಸ್ಪರ ಹಾರ ಬದಲಾಯಿಸುವ ಮೂಲಕ ಎರಡೂ ಜೋಡಿಗಳನ್ನು ಒಂದುಗೂಡಿಸಿದರು.

ಲೋಕಾ ಆದಾಲತ್‌ನಲ್ಲಿ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 495, 1ನೇ ಹೆಚ್ಚುವರಿ ನ್ಯಾಯಾಲಯದಲ್ಲಿ 319, 2ನೇ ಹೆಚ್ಚುವರಿ ನ್ಯಾಯಾಲಯದಲ್ಲಿ 413, 3ನೇ ಹೆಚ್ಚುವರಿ ನ್ಯಾಯಾಲಯದಲ್ಲಿ 194, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 29 ಪ್ರಕರಣಗಳನ್ನು ರಾಜಿಗೊಳಿಸಲಾಗಿದೆ. ಒಟ್ಟಾರೆ ಐದು ನ್ಯಾಯಾಲಯದಡಿ ರಾಜಿ ಪ್ರಕರಣಗಳಲ್ಲಿ ಕ್ರಿಮಿನಲ್ 1,372 ಪ್ರಕರಣಗಳು ಇತ್ಯರ್ಥಗೊಳಿಸಿದರೆ, 78 ಸಿವಿಲ್ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳಡಿ ವಿವಿಧ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ರ್ಇಾನ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ವಿ.ಸವಿತಾ ರಾಣಿ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ತಹಖಲೀಲ್ ಹಾಗೂ ವಕೀಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net