ಲೋಕ ಆದಾಲತ್‌ನಲ್ಲಿ ಒಂದಾದ ದಂಪತಿಗಳು

TKE 1 (COURT)
Published on

ತರೀಕೆರೆ: ಪಟ್ಟಣದ ಜೆಎಂಎ್ಸಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ

ಆಯೋಜಿಸಿದ್ದ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ

ಜೀವನ ನಡೆಸುತ್ತಿದ್ದ ಭದ್ರಾವತಿ ಮೂಲದ ಮುಸ್ಲಿಂ ದಂಪತಿಗಳು ಒಂದಾದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಊರ್ಮಿಳಾ ಅವರಿದ್ದ ಏಕಸದಸ್ಯ ಪೀಠದಲ್ಲಿ

ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ದೂರವಾಗಿದ್ದ

ರಿಯಾಜ್‌ಖಾನ್ ಮತ್ತು ಸುಾನ ಅಂಜಮ್ ದಂಪತಿಗಳನ್ನು ಸಮಾಲೋಚನೆಗೊಳಪಡಿಸಿ

ಬುದ್ಧಿಮಾತು ಹೇಳಿದಾಗ ಮತ್ತೆ ಒಂದಾಗುವ ನಿರ್ಧಾರಕ್ಕೆ ಬಂದರು. ಸಿಹಿ ಹಂಚಿ ಈ ಕ್ಷಣವನ್ನು

ಸಂಭ್ರಮಿಸಲಾಯಿತು. ನ್ಯಾಯಾಧೀಶರು ದಂಪತಿಗಳಿಗೆ ಶುಭ ಹಾರೈಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಕಾಂತ್ ಅವರಿದ್ದ ಏಕಸದಸ್ಯ ಪೀಠದಲ್ಲಿ 234, ಸಿವಿಲ್

ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್ ಅವರಿದ್ದ ಪೀಠದಲ್ಲಿ 161ಮತ್ತು ಹೆಚ್ಚುವರಿ

ನ್ಯಾಯಾಧೀಶರಾದ ಊರ್ಮಿಳಾ ಅವರಿದ್ದ ಪೀಠದಲ್ಲಿ 310ಪ್ರಕರಣ ಸೇರಿ ವಿವಿಧ 15

ಪ್ರಕರಣಗಳು ಲೋಕ ಆದಾಲತ್‌ನಲ್ಲಿ ಇತ್ಯರ್ಥಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net