ಅದಾಲತ್‌ನಲ್ಲಿ ಒಂದಾದ ದಂಪತಿ

15 nrp 2 (2)
ಎನ್.ಆರ್.ಪುರದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾದ ಆರ್.ಅಭಿಷೇಕ್ ಹಾಗೂ ಬಿ.ಶ್ವೇತಾ ದಂಪತಿಗಳು. ದಾಸರಿ ಕ್ರಾಂತಿಕಿರಣ್, ಗದಿಗೆಪ್ಪನೇಕಾರ, ಎಸ್.ಎಸ್.ಸಂತೋಷ್‌ಕುಮಾರ್ ಇದ್ದರು.
Published on

ಎನ್.ಆರ್.ಪುರ: ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿದ್ದ ವಿಚ್ಛೇದನ ಪ್ರಕರಣವನ್ನು ಇಲ್ಲಿನ ಕಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ದಾಸರಿ ಕ್ರಾಂತಿಕಿರಣ್ ದಂಪತಿಗಳ ಮನ ಒಲಿಸಿ ರಾಜಿಮಾಡಿಸಿ ದಂಪತಿಗಳನ್ನು ಮತ್ತೆ ಒಂದುಗೂಡಿಸಿದ್ದಾರೆ.
ಆರ್.ಅಭಿಷೇಕ್ ಹಾಗೂ ಬಿ.ಶ್ವೇತಾ ಅವರು 2003ರಲ್ಲಿ ವಿಚ್ಛೇದನಕ್ಕಾಗಿ ಹಿರಿಯ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ವಕೀಲ ಕೃಷ್ಣಮೂರ್ತಿ ವಕಾಲತ್ತು ವಹಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಗಡಿಗಪ್ಪನೇಕಾರ ಕರ್ತವ್ಯ ನಿರ್ವಹಿಸಿದ್ದರು. ರಾಷ್ಟ್ರೀಯ ಲೋಕಅದಾಲತ್‌ನಲ್ಲಿ ಈ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಇಬ್ಬರು ದಂಪತಿಗಳನ್ನು ಕೂರಿಸಿಕೊಂಡು ಒಟ್ಟಾಗಿ ಬಾಳುವಂತೆ ಮನ ಒಲಿಸಿದರು. ನಂತರ ಇಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್, ವಕೀಲರು,ನ್ಯಾಯಾಲಯದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net