ದಯಾಮರಣ ಕೋರಿ ದಂಪತಿಗಳಿಂದ ರಾಷ್ಟ್ರಪತಿಗೆ ಮನವಿ

MDG2 (1)
Published on

ಮೂಡಿಗೆರೆ: ಜೀವನಕ್ಕೆ ಆಸರೆಯಾಗಿದ್ದ ಜಮೀನನ್ನು ರ್ಸೇಸಿ ಕಾಯ್ದೆ ಹೆಸರಿನಲ್ಲಿ ಬ್ಯಾಂಕ್‌ನವರು ಹರಾಜು ಮಾಡಿರುವುದರಿಂದ ದಯಾಮರಣ ಕೋರಿ ರೈತ ಡಿ.ಆರ್.ವಿಜಯ ಮತ್ತು ಅವರ ಪತ್ನಿ ಹೆಚ್.ಎನ್.ಪಾರ್ವತಿ ರಾಷ್ಟ್ರಪತಿಗಳಿಗೆ ತಹಸೀಲ್ದಾರ್ ರಾಜಶೇಖರ್ ಮೂಲಕ ಮನವಿ ಸಲ್ಲಿಸಿದರು.

ರೈತ ಡಿ.ಆರ್.ವಿಜಯ ಮಾತನಾಡಿ, ತಾಲೂಕಿನ ಕೆಲ್ಲೂರು ಗ್ರಾಮದ ಸರ್ವೇ ನಂ. 40/2ರಲ್ಲಿ ತನ್ನ ಹೆಸರಿನಲ್ಲಿರುವ 4 ಎಕರೆ ಕಾಫಿ ತೋಟದ ದಾಖಲೆ ನೀಡಿ 25.90 ಲಕ್ಷ ಮತ್ತು ಅದೇ ಗ್ರಾಮದ ಸರ್ವೇ ನಂ. 40/1ರಲ್ಲಿ ತನ್ನ ಪತ್ನಿ ಹೆಚ್.ಎನ್.ಪಾರ್ವತಿ ಅವರ ಹೆಸರಿನಲ್ಲಿರುವ 3.39 ಎಕರೆ ಜಮೀನಿನ ಮೇಲೆ 6 ಲಕ್ಷ ಕೃಷಿ ಸಾಲ ಪಡೆದಿದ್ದೆವು. ಬೆಳೆನಷ್ಟದಿಂದ ಸಕಾಲದಲ್ಲಿ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

2024ರಲ್ಲಿ 5.30 ಲಕ್ಷ ಹಣ ಸಾಲದ ಬಾಬ್ತು ಪಾವತಿ ಮಾಡಲಾಗಿದ್ದು, ಸಾಲ ಮರುಪಾವತಿಸಲು ಕಾಲಾವಕಾಶ ನೀಡುವುದಾಗಿ ಬ್ಯಾಂಕ್‌ನವರು ತಿಳಿಸಿದ್ದರು. ಆದರೆ ಈಗ ಬ್ಯಾಂಕ್‌ನವರು ನಮ್ಮ ಗಮನಕ್ಕೆ ಬಾರದೆ ರ್ಸೇಸಿ ಕಾಯ್ದೆಯಡಿ 3 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಕೇವಲ 89.50 ಲಕ್ಷಕ್ಕೆ ಬೆಂಗಳೂರಿನವರಿಗೆ ಆನ್‌ಲೈನ್ ಮೂಲಕ ಹರಾಜು ಮಾಡಿ ನೀಡಲಾಗಿದೆ. ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ. ನಾವು ಈಗಾಗಲೇ ಹಿರಿಯ ನಾಗರಿಕರಾಗಿದ್ದು, ಮುಂದಿನ ಜೀವನ ನಡೆಸಲು ಬೇರೆ ಯಾವುದೇ ದಾರಿ ತೋಚುತ್ತಿಲ್ಲವೆಂದು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net