ಪಾಲಕರ ವಿರೋಧದ ನಡುವೆ ಅಂತರ್ ಧರ್ಮೀಯ ವಿವಾಹದ ಜೋಡಿ

1.jpg
Published on

ಚಿಕ್ಕಬಳ್ಳಾಪುರ: ಕುಟುಂಬದ ವಿರೋಧದ ನಡುವೆಯೂ ಅಂತರ್ ಧಮೀರ್ಯ ವಿವಾಹವಾದ ಜೋಡಿಗಳು ಪೊಲೀಸರ ರಕ್ಷಣೆ ಮೊರೆ ಹೋಗಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಯಾಪಲಹಳ್ಳಿಯ ನಿವಾಸಿ ಹರೀಶ್ ಬಾಬು ಹಾಗೂ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ಯುವತಿ ನಜ್ಮಾ ನೂತನ ದಾಂಪತ್ಯಕ್ಕೆ ಕಾಲಿಟ್ಟವರು.

ಚಿಕ್ಕಬಳ್ಳಾಪುರ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯದ ಸ್ನೇಹ ಪ್ರೀತಿ ಪ್ರೇಮವಾಗಿ ಪರಿವರ್ತನೆಯಾಗಿದೆ. ಕೊನೆಗೆ ಇಬ್ಬರು ಮನೆಯಲ್ಲಿ ಮದುವೆಯಾಗುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಯುವತಿಯ ಕುಟುಂಬಸ್ಥರು ಒಪ್ಪಿಲ್ಲ. ಆದರೂ ವಿರೋಧವನ್ನು ಲೆಕ್ಕಿಸದೇ ಜೋಡಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದೆ. ಹಾಗೆಯೇ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದೆ. ಇದರಿಂದ ನಿಯಮಾನುಸಾರ ಗಂಡ ಹೆಂಡತಿಯ ಹೇಳಿಕೆಯನ್ನು ಪಡೆದುಕೊಂಡು, ಕುಟುಂಬಸ್ಥರಿಗೆ ಇಬ್ಬರಿಗೂ ತೊಂದರೆ ಕೊಡದಂತೆ ಎಚ್ಚರಿಕೆ ನೀಡಿದೆ.

*ಮನವೊಲಿಕೆಗೆ ವಿಫಲ ಯತ್ನ

ಅಂತರ್ ಧಮೀರ್ಯ ವಿವಾಹವಾಗುವುದು ಬೇಡ, ಆಗಿರುವ ತಪು$್ಪ ಆಗಿ ಹೋಗಿದೆ. ಇನ್ನು ಬಿಟ್ಟು ಮನೆ ಬಾ ಎಂದು ನಜ್ಮಾ ಪಾಲಕರು ಮನವೊಲಿಸಲು ಯತ್ನಿಸಿದರು. ಆದರೆ, ಇದಕ್ಕೆ ಯುವತಿ ಸೊಪು$್ಪ ಹಾಕಿಲ್ಲ. ಪ್ರೀತಿಸಿ ಮದುವೆಯಾಗಿದ್ದವನನ್ನು ಬಿಟ್ಟು ಬರಲು ಸಾಧ್ಯವಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಹೇಳಿದರು. ಇದೇ ವೇಳೆ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಹರೀಶ್ ಬಾಬು ಪೊಲೀಸರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net