ಮಗನಿಂದಲೇ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಮಂಗಳೂರು ಮೂಲದ ದಂಪತಿ ಹತ್ಯೆ: ಬೆಚ್ಚಿಬೀಳಿಸುತ್ತೆ ಮಗನ ವರ್ತನೆ

okland
Published on

ಮಂಗಳೂರು: ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಮಗನೇ ತಂದೆ- ತಾಯಿಯನ್ನು ಕೊಲೆಗೈದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೂಲತಃ ಮಂಗಳೂರು ಬಲ್ಮಠ ನಿವಾಸಿ ಎಲಿಜಬೆತ್ - ಹರ್ಮನ್ ಬಂಗೇರ ಕೊಲೆಯಾದವರು. ಇಂಜಿನಿಯರಿಂಗ್ ವಿದ್ಯಾರ್ಥಿ ಶೀಲ್(23) ಆರೋಪಿ. ಮಾ.19ರಂದು ಘಟನೆ ನಡೆದಿದ್ದು, ಬಳಿಕ ಆರೋಪಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಹರ್ಮನ್ ಮುಂಬೈಯ ಶಾಲೆಯೊಂದರಲ್ಲಿ ಆಡಳಿತಾಧಿಕಾರಿಯಾಗಿದ್ದರು. ಗೋದ್ರೆಜ್ ಕಂಪೆನಿ ಉದ್ಯೋಗಿಯಾಗಿದ್ದ ಎಲಿಜಬೆತ್ ಬಳಿಕ ಮದುವೆಯಾಗಿ ಗೋವಾದಲ್ಲಿ ನೆಲೆಸಿದ್ದರು. ಮಗನ ಉನ್ನತ ಮತ್ತು ಉತ್ತಮ ವಿದ್ಯಾಭ್ಯಾಸಕ್ಕಾಗಿ ದಂಪತಿ 2007ರಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದರು. ಮಗ 2014ರಲ್ಲಿ ಪದವಿ ಪಡೆದಾಗ ತೆಗೆಸಿಕೊಂಡಿದ್ದ ಚಿತ್ರವನ್ನು ತಂದೆ ಹರ್ಮನ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದರು.

ಮಗ ಇತ್ತೀಚಿನ ಕೆಲವು ಸಮಯಗಳಿಂದ ಪಾಲಕರಿಂದ ಸುಖಾ ಸುಮ್ಮನ್ನೇ ದೂರ ಇರುತ್ತಿದ್ದ. ಇದೇ ಕಾರಣಕ್ಕಾಗಿ ಜಗಳ ತೆಗೆದು ವಿಚಿತ್ರವಾಗಿ ವರ್ತಿಸಿದ್ದ. ಜಗಳ ತಾರಕಕ್ಕೇರಿ ಚೂರಿಯಿಂದ ಇರಿದಿದ್ದ. ಅವರು ಸತ್ತರೆಂದು ಗೊತ್ತಾಗಿ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಕ್ಲೆಂಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net