ಅಪಘಾತದಲ್ಲಿ ದಂಪತಿಗೆ ಗಾಯ

Published on

ಚಾಲಕನ ನಿಯಂತ್ರಣ ತಪ್ಪಿ ವಾಹನ ಜಖಂ

ನಾಪೋಕ್ಲು : ಚಾಲಕರ ನಿಯಂತ್ರಣ ತಪ್ಪಿದ ವ್ಯಾನ್ ಅಪಘಾತಕ್ಕೀಡಾಗಿ ದಂಪತಿ ಗಾಯಗೊಂಡಿದ್ದು, ಕಾರು ಜಖಂಗೊಂಡಿದೆ.

ಸುಳ್ಯ - ಮಡಿಕೇರಿ ರಾಜ್ಯ ಹೆದ್ದಾರಿಯ ಕೊಯನಾಡು ಎಂಬಲ್ಲಿ ಶನಿವಾರ ಸಂಜೆ ಘಟನೆ ನಡೆದಿದ್ದು, ಕುಶಾಲನಗರದ ಗುಡ್ಡೆಹೊಸೂರು ನಿವಾಸಿ ಹಾಗೂ ಮಾಜಿ ಸೈನಿಕ ಪೊನ್ನಚ್ಚ ಬಾಲಕೃಷ್ಣ (ದೊರೆಮನಿ) ಹಾಗೂ ಅವರ ಪತ್ನಿ ಸುಳ್ಯದಲ್ಲಿ ಜರುಗಿದ ಸಮಾರಂಭವೊಂದರಲ್ಲಿ ಭಾಗವಹಿಸಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವ್ಯಾನ್ ಚಲಾಯಿಸುತ್ತಿದ್ದ ಬಾಲಕೃಷ್ಣ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪತ್ನಿಯ ತಲೆಗೆ ಪೆಟ್ಟುಬಿದ್ದಿದೆ. ಕಾರು ಜಖಂಗೊಂಡಿದ್ದು, ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಸುಳ್ಯ - ಮಡಿಕೇರಿ ರಾಜ್ಯ ಹೆದ್ದಾರಿಯ ಕೊಯನಾಡು ಎಂಬಲ್ಲಿ ಶನಿವಾರ ಸಂಜೆ ಜರುಗಿ ಅಪಘಾತ ವ್ಯಾನು ಜಖಂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net