

ದೇವದುರ್ಗ: ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವುದು, ಮದುವೆ ಮಾಡಿಸುವುದು ಕಷ್ಟಕರವಾಗಿದೆ. ಸಾಮೂಹಿಕ ವಿವಾಹದಿಂದ ಖರ್ಚು ಕಡಿಮೆಯಾಗಲಿದೆ ಎಂದು ಜಾಲಹಳ್ಳಿಯ ಶ್ರೀ ಜಗದರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಜಾಲಹಳ್ಳಿಯ ಶ್ರೀ ಲಕ್ಷ್ಮೀರಂಗನಾಥ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀರಂಗನಾಥ ಗೋವಿಂದ ಸೇವಾ ಸಮಿತಿಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶುಕ್ರವಾರ ಆಶೀರ್ವಚನ ನೀಡಿದರು.
ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಬಡವರು ಮಾತ್ರವಲ್ಲ ಮಧ್ಯಮ ವರ್ಗದವರು, ಶ್ರೀಮಂತರೂ ಇಂಥ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕು. ಸತಿ, ಪತಿಗಳು ಹೊಂದಾಣಿಕೆಯಿಂದ ಜೀವನ ನಡೆಸಬೇಕಿದೆ. ಮಾನವೀಯ ಮೌಲ್ಯ ಅಳವಡಿಸಿಕೊಂಡು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಬದುಕು ಸಾಗಿಸಬೇಕು ಎಂದರು.
ಸಾಮೂಹಿ ವಿವಾಹದಲ್ಲಿ 80 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಂದಕಲ್‌ನ ಶ್ರೀ ರಾಜಯೋಗಿ ಬಸವರಾಜ ಸ್ವಾಮೀಜಿ, ಶಾಸಕಿ ಕರೆಮ್ಮ ಜಿ.ನಾಯಕ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಣಿ, ಸಿಪಿಐ ಗುಂಡುರಾವ್, ತಾಪಂ ಮಾಜಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಮೇಲ್ವಿಚಾರಕಿ ನಿರ್ಮಲಾ ದೇವಿ, ಪ್ರಮುಖರಾದ ಬಸವರಾಜ ಪಂಪಾಪತಿ, ಮಹಾದೇವಮ್ಮ ಯರಕಮಟ್ಟಿ, ಶಾಂತಬಾಯಿ, ವೆಂಕೋಬ ಪೂಜಾರಿ, ಮುದುರಂಗಪ್ಪ ಕ್ಯಾದಿಗೇರಾ, ಚಂದ್ರಕಾಂತ ಚಿಕ್ಕಲ್, ಬಸವರಾಜ ಚವ್ಹಾಣ, ರಂಗನಾಥ, ಗಿರಿಯಪ್ಪ ಪೂಜಾರಿ ಇತರರಿದ್ದರು.