

ನ್ಯಾಮತಿ: ಮದುವೆಯಾಗಿ ಮೂವತ್ತು ವರ್ಷ ಕಳೆದರೂ ಮಕ್ಕಳಾಗದೆ ಒತ್ತಡಕ್ಕೆ ಒಳಗಾಗಿದ್ದ ಪಾರ್ಶ್ವವಾಯುಪೀಡಿತ ಪತಿ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಇಬ್ಬರೂ ಭಾನುವಾರ ವಿಷದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಲ್ಲಿಗೇನಹಳ್ಳಿ ಗ್ರಾಮದ ಷಣ್ಮುಖಪ್ಪ (62), ಇಂದ್ರಮ್ಮ (50) ಮೃತ ದಂಪತಿ. ಮಾತ್ರೆ ನುಂಗಿ ನೋವಿನಿಂದ ಕಿರುಚಾಡುತ್ತಿರುವುದನ್ನು ಕಂಡ ನೆರೆಹೊರೆಯವರು, ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಪತಿ ಮಾರ್ಗಮಧ್ಯವೇ ಮೃತಪಟ್ಟರೆ, ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತರ ಸಂಬಂಧಿಕರು ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.