ಮಗಳೆದುರೇ ಸಾವಿಗೆ ಶರಣಾದ ದಂಪತಿ: ಬೆಳವಿಗಿ ಗ್ರಾಮದಲ್ಲಿ ಘಟನೆ

Couple suside in guttal
Published on

ಗುತ್ತಲ: 3 ವರ್ಷದ ಮಗಳ ಸಮ್ಮುಖದಲ್ಲಿಯೇ ದಂಪತಿ ನೇಣಿಗೆ ಶರಣಾದ ಘಟನೆ ಸಮೀಪದ ಬೆಳವಿಗಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಬೆಳವಿಗಿ ಗ್ರಾಮದ ಅಂಬೇಡ್ಕರ್ ನಗರದ ನಿವಾಸಿಗಳಾದ ಹನುಮಂತ ಹೊನ್ನಪ್ಪ ಹೊನ್ನಪ್ಪನವರ (32) ಹಾಗೂ ಸವಿತಾ ಹನುಮಂತ ಹೊನ್ನಪ್ಪನವರ(26) ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಗುರುವಾರ ರಾತ್ರಿ 3 ವರ್ಷದ ಮಗಳು ಚೇತನಾ ಜೋರಾಗಿ ಅಳುತ್ತಿರುವ ಧ್ವನಿ ಮನೆಯ ಅಕ್ಕಪಕ್ಕದವರಿಗೆ ಕೇಳಿಸಿದೆ. ಇದರಿಂದ ಎಚ್ಚೆತ್ತ ಮನೆಯವರು ಹನುಮಂತ ಹೊನ್ನಪ್ಪನವರ ಮನೆಯ ಬಾಗಿಲು ಬಡಿದ್ದಾರೆ. ಆದರೆ, ಮಗು ಮಾತ್ರ ಅಳುತ್ತಿದ್ದಾಗ ಅನುಮಾನಗೊಂಡು ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನೋಡಿದಾಗ ಹನುಮಂತ ಹಾಗೂ ಸವಿತಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. ಕೂಡಲೇ ಕೆಳಗಡೆ ಇಳಿದ ನೆರೆಹೊರೆಯವರು ಮಗವನ್ನು ಎತ್ತಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದ್ದಾರೆ. ಘಟನೆಯ ಬಗ್ಗೆ ಯಾವುದೇ ಸಂಶಯವಿಲ್ಲ. ತನ್ನ ಅಳಿಯ ಹಾಗೂ ಮಗಳ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಮೃತ ಸವಿತಾಳ ತಾಯಿ ಗುತ್ತಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net