

ಧಾರವಾಡ: ಮನೆಯ ಮುಂಬಾಗಿಲನ್ನೇ ಕೊರೆದು ಒಳನುಗ್ಗಿದ ಕಳ್ಳರು, ಪತಿ- ಪತ್ನಿಯನ್ನು ಥಳಿಸಿ ಸುಮಾರು 100 ಗ್ರಾಂ ಚಿನ್ನದ ಆಭರಣ ದೋಚಿ ಪರಾರಿಯಾದ ಘಟನೆ ನಗರದ ನವಲೂರಿನಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಅಶೋಕ ಕದಂ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ನಾಲ್ವರು ದರೋಡೆಕೋರರ ತಂಡ ಕದಂ ಅವರ ಮನೆಯ ಬಾಗಿಲನ್ನು ಕೊರೆದು ಒಳನುಗ್ಗಿದೆ. ನಂತರ ಕಬ್ಬಿಣದ ಸರಳುಗಳಿಂದ ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ದಂಪತಿಗೆ ಜೀವ ಬೆದರಿಕೆ ಹಾಕಿ ಅಲ್ಮೇರಾದಲ್ಲಿದ್ದ ಚಿನ್ನದ ಆಭರಣ ದೋಚಿ ಪರಾರಿಯಾಗಿದ್ದಾರೆ. ಗಾಯÁಳು ದಂಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ತೆರಳಿದ ವಿದ್ಯಾಗಿರಿ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.