

ಅರಸೀಕೆರೆ: ಮಹಿಳಾ ಸ್ವಾವಲಂಬನೆಯಿಂದ ಮಾತ್ರವೇ ದೇಶ ಹಾಗೂ ಕುಟುಂಬದ ಪ್ರಗತಿ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್ ರಾವ್ ಹೇಳಿದರು.
ತಾಲೂಕಿನ ಬಾಣಾವರ ಗ್ರಾಮದ ಕನಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಮನೆಯೊಡತಿಯಾಗಿ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ಹೊಂದಿರುವಂತೆ ಸ್ವ-ಸಹಾಯ ಸಂಘಗಳ ನೆರವು ಪಡೆದು ಆರ್ಥಿಕ ಶಕ್ತಿಯಾಗಿ ದುಡಿಯುವ ಪ್ರವೃತ್ತಿ ಬೆಳೆಸಿಕೊಂಡಾಗ ಮಾತ್ರವೇ ಆರ್ಥಿಕ ಪ್ರಗತಿ ಕಾಣಲು ಸಾಧ್ಯ. ಹೈನುಗಾರಿಕೆ, ಟೈಲರಿಂಗ್ ಸೇರಿ ಹಲವು ಕ್ಷೇತ್ರಗಳಲ್ಲಿ ದುಡಿಯುವ ಕೈಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಸರೆ ಆಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಾಣಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ಸುರೇಶ್, ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತಾಯ, ವೈದ್ಯೆ ಡಾ.ಟಿ.ಕೆ.ಪ್ರಿಯಾ, ಗ್ರಾಪಂ ಸದಸ್ಯರಾದ ಭಾಗ್ಯಮ್ಮ, ಶ್ರೀಧರ್, ಕ್ಷೇತ್ರ ಯೋಜನಾಧಿಕಾರಿ ಜಯಂತ್, ಸಿಪಿಐ ರಾಘವೇಂದ್ರ ಪ್ರಕಾಶ್ ಇತರರು ಇದ್ದರು.