ರೈತರ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ

ಕೆ.ಆರ್.ನಗರದ ಶ್ರೀ ಕೃಷ್ಣಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕೆ.ಎಲ್.ಹೇಮಂತ್‌ಕುಮಾರ್, ಪ್ರಗತಿ ಪರ ರೈತರಾದ ಅರ್ಜುನಹಳ್ಳಿ ಕವಿತಾ, ಅರಸನಕೊಪ್ಪಲು ತಮ್ಮಯ್ಯ, ಕೆ.ಆರ್.ನಗರದ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಡಿ.ರವಿಶಂಕರ್, ಅಂಶಿಪ್ರಸನ್ನಕುಮಾರ್, ಡಾ.ಮಂಜುನಾಥ್‌ಅಂಗಡಿ, ಡಾ.ಆರ್.ಎನ್.ಪುಷ್ಪಾ, ಅರ್ಜುನಹಳ್ಳಿ ರಾಮ್‌ಪ್ರಸಾದ್, ಗರುಡಗಂಭ ಸ್ವಾಮಿ, ಎಸ್.ಡಿ.ದಿವಾಕರ್ ಮತ್ತಿತರರಿದ್ದರು.
ಕೆ.ಆರ್.ನಗರದ ಶ್ರೀ ಕೃಷ್ಣಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕೆ.ಎಲ್.ಹೇಮಂತ್‌ಕುಮಾರ್, ಪ್ರಗತಿ ಪರ ರೈತರಾದ ಅರ್ಜುನಹಳ್ಳಿ ಕವಿತಾ, ಅರಸನಕೊಪ್ಪಲು ತಮ್ಮಯ್ಯ, ಕೆ.ಆರ್.ನಗರದ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಡಿ.ರವಿಶಂಕರ್, ಅಂಶಿಪ್ರಸನ್ನಕುಮಾರ್, ಡಾ.ಮಂಜುನಾಥ್‌ಅಂಗಡಿ, ಡಾ.ಆರ್.ಎನ್.ಪುಷ್ಪಾ, ಅರ್ಜುನಹಳ್ಳಿ ರಾಮ್‌ಪ್ರಸಾದ್, ಗರುಡಗಂಭ ಸ್ವಾಮಿ, ಎಸ್.ಡಿ.ದಿವಾಕರ್ ಮತ್ತಿತರರಿದ್ದರು.
Published on

ಕೆ.ಆರ್.ನಗರ: ದೇಶದ ಬೆನ್ನೆಲುಬಾಗಿರುವ ರೈತರು ಆರ್ಥಿಕವಾಗಿ ಅಭಿವೃದ್ಧಿಗೊಂಡಾಗ ಮಾತ್ರ ಆ ದೇಶ ಸರ್ವಾಂಗೀಣವಾಗಿ ಮುಂದುವರೆಯಲು ಸಾಧ್ಯ. ಇದನ್ನು ಅರಿತ ನಮ್ಮ ಸರ್ಕಾರಗಳು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಬೇಕಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಶ್ರೀ ಕೃಷ್ಣಮಂದಿರದಲ್ಲಿ ತಾಲೂಕು ಕೃಷಿಕ ಸಮಾಜ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರ ಮತ್ತು ತಾಲೂಕು ಯುವ ರೈತ ವೇದಿಕೆ ವತಿಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಭಾರತ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ರೈತರು ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಇದರಿಂದ ಜಗತ್ತಿಗೆ ಮಾದರಿಯಾಗಿದ್ದೇವೆ. ಇಂತಹ ರೈತರಿಗೆ ಬೇಕಾಗಿರುವ ನೀರು, ವಿದ್ಯುತ್ ಮತ್ತು ಅವರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಅವರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಅವುಗಳ ಪರಿಹಾರಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ. ಇದರ ಜತೆಗೆ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಷ್‌ನವರು ಟೆಂಡರ್ ನೋಂದಣಿ ಮಾಡಿಸುವಂತೆ ಸಕ್ಕರೆ ಸಚಿವರಿಗೆ ಸದನದಲ್ಲೇ ಒತ್ತಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎಫ್‌ಐಡಿ ನೋಂದಾಯಿಸಿ: ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳನ್ನು ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಲಾಗಿದ್ದು, ಈ ಭಾಗದ ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಸರ್ಕಾರದಿಂದ ಪರಿಹಾರ ಸೇರಿದಂತೆ ಎಲ್ಲಾ ರೀತಿಯ ಸವಲತ್ತುಗಳನ್ನು ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು, ಇದಕ್ಕೆ ಸಂಬಂಧಿಸಿದ ಎಫ್‌ಐಡಿಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನೋಂದಣಿ ಮಾಡಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಮನವಿ ಮಾಡಿದರು.

ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್ ಮಾತನಾಡಿ, ರೈತರು ಏಕ ಬೆಳೆ ಬೆಳೆಯುವುದನ್ನು ಕೈಬಿಟ್ಟು ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ತಾವು ಆರ್ಥಿಕವಾಗಿ ಸದೃಡರಾಗಲು ಸಾಧ್ಯ. ರೈತರು ಮತ್ತು ಸೈನಿಕರು ದೇಶದ ಎರಡು ಕಣ್ಣುಗಳಾಗಿದ್ದು ಸರ್ಕಾರಗಳು ಅವರಿಗೆ ಬೇಕಾಗುವ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸಬೇಕು ಎಂದು ಕೋರಿದರು.

ಸಮಾಜ ಸೇವಕ ಕೆ.ಎಲ್.ಹೇಮಂತ್‌ಕುಮಾರ್, ಪ್ರಗತಿಪರ ರೈತರಾದ ಅರ್ಜುನಹಳ್ಳಿ ಕವಿತಾ, ಅರಸನಕೊಪ್ಪಲು ತಮ್ಮಯ್ಯ, ಕೆ.ಆರ್.ನಗರದ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಮಂಜುನಾಥ್ ಅಂಗಡಿ, ಸಸ್ಯ ಸಂರಕ್ಷಣೆ ವಿಸ್ತರಣಾ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಎನ್.ಪುಷ್ಪಾ, ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮ್‌ಪ್ರಸಾದ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ದಿವಾಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಗರುಡಗಂಭಸ್ವಾಮಿ, ಪೂಜಾರಿ ರವಿ, ಎಂ.ಎ.ನಾಗೇಂದ್ರ, ಬಿ.ಎಚ್.ಕುಮಾರ, ವೆಂಕಟೇಶ್, ತೋಟಗಾರಿಕೆ ಇಲಾಖೆ ನಿರ್ದೇಶಕಿ ಭಾರತೀ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net