ದೇಶದ ಮೊದಲ ಐಎಸ್‌ಸಿಸಿ ಪ್ಲಸ್ ಟೈರ್; ಜೆಕೆ ಟೈರ್ ಚೆನ್ನೈ ಘಟಕದಲ್ಲಿ ಉತ್ಪಾದನೆ ಆರಂಭ

jk
Published on

ಬೆಂಗಳೂರು : ಟೈರ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ, ಹೊಸ ಆವಿಷ್ಕಾರದಲ್ಲಿ ಹೆಸರಾಗಿರುವ ಜೆಕೆ ಟೈರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ಇದೀಗ ತನ್ನ ಚೆನ್ನೈ ಟೈರ್ ಪ್ಲಾಂಟ್‌ನಲ್ಲಿ ಇಂಟರ್ ನ್ಯಾಷನಲ್ ಸಸ್ಟೇನೇಬಿಲಿಟಿ ಮತ್ತು ಕಾರ್ಬನ್ ಸರ್ಟಿಫಿಕೇಷನ್ (ಐಎಸ್‌ಸಿಸಿ ಪ್ಲಸ್) ಪ್ರಮಾಣಿತ ಸುಸ್ಥಿರ ಕಚ್ಚಾ ವಸ್ತುಗಳನ್ನು ಬಳಸಿ ತಯಾರಿಸಲಾಗುವ ಯುಎಕ್ಸೃ್ ರಾಯಲ್ ಗ್ರೀನ್ ಪ್ಯಾಸೆಂಜರ್ ಕಾರ್ ಟೈರ್‌ಗಳ ಉತ್ಪಾದನೆ ಆರಂಭಿಸಿದೆ. ಭಾರತದ ಟೈರ್ ಉದ್ಯಮದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ಡಿ) ಪ್ರಯತ್ನಗಳ ಮೂಲಕ ಹಸಿರು ತಂತ್ರಜ್ಞಾನಕ್ಕೆ ಕೊಡುಗೆ ನೀಡುವ ಮತ್ತು ಕಾರ್ಬನ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಜಾಗತಿಕವಾಗಿ ಗುರುತಿಸಲ್ಪಟ್ಟ ಐಎಸ್‌ಸಿಸಿ ಪ್ಲಸ್ ಚೌಕಟ್ಟಿನಡಿಯಲ್ಲಿ ನೀಡಲಾದ ಈ ಪ್ರಮಾಣೀಕರಣವು, ಜವಾಬ್ದಾರಿಯುತವಾಗಿ ಸಂಗ್ರಹಿಸಿದ ಮರುಬಳಕೆ ಮಾಡಬಹುದಾದ ಮತ್ತು ನವೀಕರಿಸಬಹುದಾದ ಕಚ್ಚಾ ವಸ್ತುಗಳ ಬಳಕೆಯನ್ನು ದೃಢೀಕರಿಸುತ್ತದೆ. ಜೊತೆಗೆ ಇದು ಕಂಪನಿಯ ಪರಿಸರ ಜವಾಬ್ದಾರಿ ಮತ್ತು ಅತ್ಯುತ್ತಮ ಉತ್ಪಾದನಾ ಪದ್ಧತಿಗಳೆಡೆಗಿನ ಕಂಪನಿಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ.

ಪರಿಸರ ಸಂರಕ್ಷಣೆಯ ಬದ್ದತೆಯ ಪ್ರತೀಕ

ಸುಸ್ಥಿರ ಟೈರ್ ಉತ್ಪಾದನೆಯನ್ನು ಆರಂಭಿಸಿದ್ದು, ಇದು ಜೆಕೆ ಟೈರ್‌ನ ಪರಿಸರ ಜವಾಬ್ದಾರಿಯ ಬದ್ಧತೆಯ ಪ್ರತೀಕವಾಗಿದೆ ಎಂದು ಜೆಕೆ ಟೈರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಹೇಳಿದ್ದಾರೆ. ಉನ್ನತ ಕಾರ್ಯಕ್ಷಮತೆಯನ್ನು ಪರಿಸರ ಜವಾಬ್ದಾರಿಯೊಂದಿಗೆ ಮಿಳಿತಗೊಳಿಸುವ ಮೂಲಕ ಹೊಸ ಉದ್ಯಮ ಮಾನದಂಡಗಳನ್ನು ಸ್ಥಾಪಿಸಲು ಸಂತೋಷವಾಗುತ್ತಿದ್ದು, ಈ ಸಾಧನೆಯು ಹಸಿರು ತಂತ್ರಜ್ಞಾನ, ಅತ್ಯುತ್ತಮ ಆರ್ಥಿಕತೆ ತತ್ವಗಳು ಮತ್ತು ವಿಶ್ವದರ್ಜೆಯ, ಪರಿಸರಕ್ಕೆ ಕಡಿಮೆ ಪರಿಣಾಮ ಬೀರುವ ಉತ್ಪನ್ನಗಳ ತಯಾರಿಕೆಯಲ್ಲಿನ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಹಲವು ದಾಖಲೆಗಳಿಗೆ ಸಾಕ್ಷಿ ಜೆಕೆ ಟೈರ್

ಮೂಲಭೂತವಾಗಿ ಸುಸ್ಥಿರತೆ ಕಡೆಗೆ ಗಮನ ಹರಿಸುವ ಜೊತೆಯಲ್ಲಿಯೇ ಶ್ರೇಷ್ಠತೆ ಮತ್ತು ವಿಶ್ವಾಸಾರ್ಹತೆಯು ಜೆಕೆ ಟೈರ್ ಹೆಗ್ಗಳಿಕೆ. 1995ರಲ್ಲಿ ತನ್ನ ಎಲ್ಲಾ ಉತ್ಪನ್ನಗಳ ಮೇಲೆ ಐಎಸ್‌ಒ 9001 ಪ್ರಮಾಣೀಕರಣವನ್ನು ಪಡೆದ ವಿಶ್ವದ ಮೊದಲ ಟೈರ್ ಕಂಪನಿ ಎಂಬ ಹೆಗ್ಗಳಿಕೆ ಜೆಕೆ.ಟೈರ್‌ಗಿದೆ. ಯುಎಕ್ಸೃ್ ರಾಯಲ್ ಗ್ರೀನ್ ಸೇರಿದಂತೆ ಪ್ರತಿಯೊಂದು ಟೈರ್ ಆವಿಷ್ಕಾರ ಕೂಡ ಈ ಗುಣಮಟ್ಟ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದೆ. ಸದ್ಯ ಕಚ್ಚಾ ವಸ್ತುಗಳಿಗಾಗಿ ಐಎಸ್‌ಸಿಸಿ ಪ್ಲಸ್ ಪ್ರಮಾಣೀಕರಣವು ಮೌಲ್ಯ ಸರಪಳಿಯಾದ್ಯಂತ ಸುಸ್ಥಿರ ವಸ್ತುಗಳ ಸಂಪೂರ್ಣ ಬಳಕೆಯನ್ನು ಖಾತರಿಪಡಿಸಿದ್ದು, ಜೆಕೆ ಟೈರ್ ಭಾರತದ ಹಸಿರು ಕೈಗಾರಿಕಾ ಪ್ರಯಾಣದಲ್ಲಿ ಜವಾಬ್ದಾರಿಯುತ ಸಂಸ್ಥೆಯಾಗಿ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net