

ಸಿರವಾರ: ಶಿಕ್ಷಕರ ವೃತ್ತಿ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ಜ್ಞಾನಭಾರತಿ ಶಾಲೆಯಲ್ಲಿ ರಾಯಚೂರು ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಭಾನುವಾರ ಮಾತನಾಡಿದರು. ದೇಶ ನಿರ್ಮಾಣದಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸಿದ್ದಾರೆ.
ದೇಶದ ಪ್ರತಿಯೊಬ್ಬ ಪ್ರಜೆ ಶಿಸ್ತಿನಿಂದ ಜೀವನ ಮಾಡಬೇಕು. ಶಿಕ್ಷಣ ಇಲ್ಲವಾದರೆ ದೇಶ ಅಭಿವೃದ್ಧಿಯಲ್ಲಿ ಶೂನ್ಯ. ಅದ್ದರಿಂದ ದೇಶಕ್ಕೆ ಶಿಕ್ಷಕರ ಕೊಡುಗೆ ಅಪಾರ, ಮನುಷ್ಯನಲ್ಲಿ ಮಾನವಿತೆ ಮೌಲ್ಯಗಳನ್ನು ಅಳವಡಿಸಿ ದೇಶಕ್ಕೆ ಉತ್ತಮ ಪ್ರಜೆಯಾಗಿ ತಯಾರಿ ಮಾಡುತ್ತಾರೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತಾರೆ ಎಂದರು.
ಖಾಸಗಿ ಶಾಲಾ ಶಿಕ್ಷಕರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್, ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿ, ಪಪಂ ಅಧ್ಯಕ್ಷ ವೈ.ಭೂಪನಗೌಡ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಜಿಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು, ಖಜಾಂಚಿ ವೆಂಕಟರೆಡ್ಡಿ ಬಲ್ಕಲ್,
ಖಾ.ಶಿ. ಸಂ.ಜಿಲ್ಲಾ ಅಧ್ಯಕ್ಷರಾದ ಟಿ.ಬಸವರಾಜ ಪ್ರಮುಖರಾದ ರವಿ ಬೋಸರಾಜು, ಎನ್.ಉದಯ ಕುಮಾರ ಸಾಹುಕಾರ್, ಜಿ.ಲೋಕರೆಡ್ಡಿ, ಶಿವಶರಣ ಸಾಹುಕಾರ ಅರಿಕೇರಿ,ರಮೇಶ ದರ್ಶನಕರ್, ಎಸ್.ರವಿಕುಮಾರ ಗೋನಾಳ, ಕೇಶವರೆಡ್ಡಿ, ಎಚ್.ಶರ್ಪುದ್ದೀನ್, ವಾಹಬ್, ಮೋಹಿನ್ ಕವಿತಾಳ, ಚಂದ್ರಶೇಖರ ಬಲ್ಲಟಗಿ ಇದ್ದರು.