

ಕೊಕಟನೂರ: ಹೊಸ ಆವಿಷ್ಕಾರಗಳು, ಸಂಶೋಧನೆಗಳು ವಿಜ್ಞಾನದ ಪ್ರಗತಿಯನ್ನು ಸೂಚಿಸುತ್ತವೆ. ತಾಂತ್ರಿಕ ಹಾಗೂ ಉಪಗ್ರಹ ಆಧಾರಿತ ಬೆಳವಣಿಗೆಗೆ ಭಾರತದ ವಿಜ್ಞಾನಿಗಳ ಕೊಡುಗೆ ಅನನ್ಯ ಎಂದು ಸಿಆರ್‌ಪಿ ವಿ.ಎಸ್. ಕನಾಳ ಹೇಳಿದರು.
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳಿಂದ ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಭೂ ಮಂಡಲದಲ್ಲಿ ಕಣ್ಣಿಗೆ ಕಾಣದ ಅಸಂಖ್ಯಾತ ಅಣುಗಳಿವೆ. ಹಾಗೆಯೇ ಚಂದ್ರ, ಗುರು, ಮಂಗಳ ಸೇರಿ ಉಳಿದ ಗ್ರಹಗಳಲ್ಲಿಯೂ ವಿಜ್ಞಾನಿಗಳು ಹೊಸ ಹೆಜ್ಜೆಗಳಿಗಾಗಿ ಹುಡುಕುತ್ತಿದ್ದಾರೆ. ಮಾನವನ ದೇಹದಲ್ಲಿರುವ ಅಂಗಾಂಗಗಳಲ್ಲಿನ ಸೂಕ್ಷ್ಮಾತೀತ ಜೀವಗಳ ಸಂಶೋಧನೆ ಆಗಬೇಕಿದೆ.
ಸಮುದ್ರದಲ್ಲಿರುವ ಕಪ್ಪೆ ಚಿಪ್ಪುಗಳನ್ನು ಎಣಿಕೆ ಮಾಡಲು ಸಾಧ್ಯವಿಲ್ಲ ಎಂದರು. ವಿದ್ಯಾರ್ಥಿಗಳು ವಾಯು ಮಾಲಿನ್ಯ, ಪವನಶಕ್ತಿ, ನ್ಯೂಟನ್ ಚಕ್ರ, ಚಲನೆ ಕನಸಿನ ಅರಮನೆ, ಭೂ ಸಾರಿಗೆ ವಾಹನ, ಶಬ್ದದ ಪ್ರತಿಫಲನ, ಸೌರವ್ಯೆಹ, ಬೆಳಕಿನ ವಕ್ರೀಭವನ ಪ್ರಾತ್ಯಕ್ಷಿಕೆ ಕುರಿತು ಸಾರ್ವಜನಿಕರಿಗೆ ತಿಳಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಹುಬಲಿ ನೇಮಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಯು.ವಿ. ಗೇಗಾಂವಿ,
ಎಸ್.ಟಿ. ಕೊಡಗ, ಭರತೇಶ ನೇಮಗೌಡ, ಈರಪ್ಪ ಯಡೂರ, ಮಹಾವೀರ ಮಹಿಷವಾಡಗಿ, ಕುಮಾರ ಪಾಟೀಲ, ಪ್ರಕಾಶ ಬಡಿಗೇರ, ಎಸ್.ಬಿ. ಕುಂಚನೂರ, ಬಿ.ಕೆ. ಅಗಸರ, ಎಲ್.ಎ. ಪಟ್ಟಣ, ಎಸ್.ಎನ್. ಮುಲ್ಲಾ, ಟಿ.ಪಿ. ಅಥಣಿ, ಲಕ್ಷ್ಮಣ ಬಿರಾದಾರಪಾಟೀಲ, ಶ್ರೀಶೈಲ ಮಚಗಾರ ಇತರರು ಪಾಲ್ಗೊಂಡಿದ್ದರು.