ದೇಶ ಕಂಡ ಶ್ರೇಷ್ಠ ಗುರು

5 Hanumasagara 2
ಹನುಮಸಾಗರದ ಕುರುಬಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಮುಖ್ಯಶಿಕ್ಷಕ ಚಂದಪ್ಪ ಹಕ್ಕಿ, ಪ್ರಮುಖರಾದ ಚಂದಪ್ಪ ತಳವಾರ, ಶಿಕ್ಷಕಿಯರಾದ ಮಲ್ಲಮ್ಮ ಚನ್ನಪ್ಪನವರ, ಗೌರಮ್ಮ ತಳವಾರ, ಮ್ಯಾಗ್ಡಲೀನಾ, ಮಧುಮತಿ ಗುಬ್ಬಣ್ಣನವರ, ವಿದ್ಯಾ ಮಾವಿನಕಟ್ಟಿ, ಮುದಕಪ್ಪ ಹುಣಿಶ್ಯಾಳ, ಜರೀನಾ ಜಮಖಾನ, ಮಂಜುನಾಥ ಅಳ್ಳೊಳ್ಳಿ, ತುಂಗಾ ಶಿರಗುಂಪಿ, ಭಾರತಿ ಹುಡೇದ, ಭಾರತಿ ಬಿಲ್ಕಾರ, ಲಕ್ಮೀ ಬಾಂಡಗೆ ಇತರರಿದ್ದರು.
Published on

ಹನುಮಸಾಗರ: ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ಚಂದಪ್ಪ ಹಕ್ಕಿ ಹೇಳಿದರು.

ಪಟ್ಟಣದ ಕುರಬಗೇರಾ ಸಮಾಹಿಪ್ರಾ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರ ದಿನಾಚರಣೆ ನಿಮಿತ್ತ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸರ್ವೆಪಲ್ಲಿ ರಾಧಾಕೃಷ್ಣನ್ ತಮ್ಮ ಅನುಭವಗಳನ್ನು ಧಾರೆ ಎರೆಯುವ ಮೂಲಕ ಶಿಕ್ಷಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದೇಶ ಕಂಡ ಶ್ರೇಷ್ಠ ಶಿಕ್ಷಕರಲ್ಲಿ ಮೊದಲಿಗರು. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಅವರ ಜನ್ಮ ದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತಿದೆ ಎಂದರು.

ಪ್ರಮುಖರಾದ ಚಂದಪ್ಪ ತಳವಾರ, ಶಿಕ್ಷಕಿಯರಾದ ಮಲ್ಲಮ್ಮ ಚನ್ನಪ್ಪನವರ, ಗೌರಮ್ಮ ತಳವಾರ, ಮ್ಯಾಗ್ಡಲೀನಾ, ಮಧುಮತಿ ಗುಬ್ಬಣ್ಣನವರ, ವಿದ್ಯಾ ಮಾವಿನಕಟ್ಟಿ, ಮುದಕಪ್ಪ ಹುಣಿಶ್ಯಾಳ, ಜರೀನಾ ಜಮಖಾನ, ಮಂಜುನಾಥ ಅಳ್ಳೊಳ್ಳಿ, ತುಂಗಾ ಶಿರಗುಂಪಿ, ಭಾರತಿ ಹುಡೇದ, ಭಾರತಿ ಬಿಲ್ಕಾರ, ಲಕ್ಮೀ ಬಾಂಡಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net