ದೇಶದ ಇತಿಹಾಸದಲ್ಲಿ ಕ್ರೂರ ಘಟನೆ

16-SanduruP1
Published on

ಸಂಡೂರು: ಪಂಜಾಬಿನ ಜಲಿಯನ್ ವಾಲಾಬಾಗ್‌ನಲ್ಲಿ 1919ರ ಏ.13ರಂದು ನಡೆದ ಹತ್ಯಾಕಾಂಡ ಭಾರತದ ಇತಿಹಾಸದಲ್ಲಿ ಅತ್ಯಂತ ಕ್ರೂರ ಮತ್ತು ಅಮಾನವೀಯ ಘಟನೆಯಾಗಿದೆ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ ಎಸ್.ನಾನಾವಟೆ ತಿಳಿಸಿದರು.

ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಲಕ್ಷ್ಮೀ ಎಸ್.ನಾನಾವಟೆ ಬಿ.ಇಡಿ ಕಾಲೇಜಿನಲ್ಲಿ ಜಲಿಯನ್ ವಾಲಾಬಾಗ್ ಕರಾಳ ದಿನಾಚರಣೆಯ ಸ್ಮರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಬೈಸಾಕಿ ಹಬ್ಬದ ಪ್ರಯುಕ್ತ ಸೇರಿದ್ದ ಅಸಂಖ್ಯಾತ ಜನ ಸಮೂಹದ ಮೇಲೆ ಜನರಲ್ ಡಯರ್ ಮೇಲಧಿಕಾರಿಗಳ ಆದೇಶವಿಲ್ಲದೆ 1250 ಸುತ್ತುಗಳ ಗುಂಡಿನ ಮಳೆ ಸುರಿಸಿದ್ದ ಎಂದರು.

ಜಲಿಯನ್ ವಾಲಾಬಾಗ್ ಘಟನೆ ನಡೆದ 20 ವರ್ಷಗಳ ತರುವಾಯ ಬ್ರಿಟನ್ನಿನ ಕಾಕ್‌ಸ್ಟನ್‌ಹಾಲ್‌ನಲ್ಲಿ ಉದಂಸಿಂಗ್ ಗುಂಡು ಹಾರಿಸಿ ಜನರಲ್ ಡಯರ್‌ನನ್ನು ಕೊಂದ. ನನ್ನ ಪ್ರತಿಜ್ಞೆ ಈಡೇರಿತು ಎಂದು ಉದಂಸಿಂಗ್ ಪೊಲೀಸರಿಗೆ ಶರಣಾದ. ನಂತರ ಉದಂಸಿಂಗ್‌ಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಉದಂಸಿಂಗ್ ಆಸೆಯಂತೆ ಜಲಿಯನ್ ವಾಲಾಬಾಗ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಮಾರ ಎಸ್.ನಾನಾವಟೆ ಹೇಳಿದರು. ಪ್ರಾಂಶುಪಾಲ ಯು.ದೇವರಾಜ, ಉಪನ್ಯಾಸಕರಾದ ಅಶೋಕ, ಜಿ.ಎಂ.ಕೊಟ್ರೇಶ, ಎಂ.ಸೌಜನ್ಯ, ಪ್ರಶಿಕ್ಷಣಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net