ರೈತರು ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ

IMG-20241007-WA0127
Published on


ಹನಗೋಡು : ಹನಗೋಡು ಹೋಬಳಿಯ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯ ಸಂಖ್ಯೆ 62 ರಲ್ಲಿ 2024-25 ನೇ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಗೆ ಸೋಮವಾರ ಶಾಸಕ ಜಿ.ಡಿ.ಹರೀಶ್‌ಗೌಡ ಚಾಲನೆ ನೀಡಿದರು.


ರೈತರು ಅತಿವೃಷ್ಟಿಯಿಂದ ಸಂಕಷ್ಟದಲ್ಲಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಮಂಡಳಿ ಅಕಾರಿಗಳು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೆಳೆದ ಬೆಳೆಗೆ ಸರಾಸರಿ ತಂಬಾಕಿಗೆ ಉತ್ತಮ ಬೆಲೆ ನೀಡಬೇಕು. ರೈತ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದರು.


ಈ ವರ್ಷ ಅತೀಯಾದ ಮಳೆಯಿಂದ ಅರ್ಧದಷ್ಟು ತಂಬಾಕು ನಷ್ಟವಾಗಿದ್ದು, ರೈತನ ಶ್ರಮ ಅವರು ಕೃಷಿಗಾಗಿ ಮಾಡಿರುವ ಖರ್ಚು ವೆಚ್ಚ ಅಕವಾಗಿದೆ. ಅದ್ದರಿಂದ ಮುಂದೆ ರೈತರು ತಂಬಾಕು ಬೆಳೆಯಲು ಅನುಕೂಲವಾಗುವ ರೀತಿಯಲ್ಲಿ ಉತ್ತಮ ಬೆಲೆ ನೀಡಬೇಕು. ರೈತರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಸಲಹೆ ನೀಡಿದರು.


ತಂಬಾಕು ಮಂಡಳಿ ಸದಸ್ಯ ದಿನೇಶ್ ಮಾತನಾಡಿ, ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರಿಗೆ ಮೂಲ ಸೌಕರ್ಯ ಒದಗಿಸಿ ಕೊಡುವ ಮತ್ತು ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.


ರೈತರು ಹರಾಜು ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ, ಉತ್ತಮ ದರ, ಹರಾಜಿನಲ್ಲಿ ಪಾರದರ್ಶಕತೆ ಕಾಪಾಡುವಂತೆ ಶಾಸಕ, ತಂಬಾಕು ಅಕಾರಿಗಳು ಮತ್ತು ಬೈಯರ್ಸ್‌ಗಳಿಗೆ ಮನವಿ ಮಾಡಿದರು.


ಚಿಲ್ಕುಂದ ಗ್ರಾ.ಪಂ. ಅಧ್ಯಕ್ಷ ಸತೀಶ್, ಚಿಲ್ಕುಂದ ಹರಾಜು ಅೀಕ್ಷಕ ಸಿದ್ದರಾಮು ಡ್ಯಾಂಗೆ, ಕ್ಷೇತ್ರ ವಿಸ್ತರಣಾಕಾರಿಗಳಾದ ಸಂದೀಪ್, ರೂಪಾ, ಕ್ಷೇತ್ರ ಸಹಾಯಕರಾದ ಪ್ರಮೋದ್, ನವೀನ್, ರಮೇಶ್, ಕಂಪ್ಯೂಟರ್ ಟೆಕ್ನಿಷಿಯನ್ ಶಿವಕುಮಾರ್, ತಂಬಾಕು ಬೆಳೆಗಾರರಾದ, ಕರಣಕರ, ಕಲ್ಲಹಳ್ಳಿ ಶಿವಣ್ಣ, ಶಿವಬಸಪ್ಪ, ಕಚುವಿನಹಳ್ಳಿ ಆನಂದ್, ಬ್ಯಾಲಾಳು ಶಿವಣ್ಣ, ಭಾಸ್ಕರ್ ಮಲ್ಲೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net