

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ ಹಿನ್ನೆಲೆ ಬುಧವಾರ ನಿಗದಿಯಾಗಿದ್ದ ಗ್ರಾಪಂ ಮತ ಎಣಿಕೆ ಪ್ರಕ್ರಿಯೆ ಕಾರ್ಯ ಗುರುವಾರಕ್ಕೆ ಮುಂದೂಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಕಳೆದ ಡಿ.8ರಂದು ಚಿಕ್ಕಬಳ್ಳಾಪುರ, ಉಡುಪಿ, ಬೆಳಗಾವಿ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅವಧಿ ಮುಗಿದಿರುವ ಗ್ರಾಮ ಪಂಚಾಯ್ತಿಗಳಿಗೆ ಮತದಾನ ನಡೆದಿತ್ತು. ಇವುಗಳ ಮತ ಎಣಿಕೆ ಬುಧವಾರ ನಿಗದಿಯಾಗಿತ್ತು. ಎಸ್.ಎಂ.ಕೃಷ್ಣ ನಿಧನದ ಕಾರಣ ಎಣಿಕೆ ಕಾರ್ಯವನ್ನು ಗುರುವಾರ (ಡಿ.12) ಮರುನಿಗದಿಪಡಿಸಿದೆ. ಮತ ಎಣಿಕೆ ಮುಂದೂಡಿಕೆ ದಿನಾಂಕದ ಮಾಹಿತಿಯನ್ನು ಎಲ್ಲ ಕ್ಷೇತ್ರದ ಅಭ್ಯರ್ಥಿಗಳಿಗೆ ತಿಳಿಸುವಂತೆ ಆಯೋಗದ ಆದೇಶದಲ್ಲಿ ತಿಳಿಸಲಾಗಿದೆ.